ಉಡುಪಿ:ಖ್ಯಾತ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ದೇವಾಲಯದ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೇ ದಿಢೀರ್ ಆಗಿ ಶುಕ್ರವಾರ ಸಂಜೆ ವೇಳೆ ಅನುಷ್ಕಾ ಶೆಟ್ಟಿ ತಮ್ಮ ಸಂಬಂಧಿಕರ ಜೊತೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.ಅನುಷ್ಕಾ ಶೆಟ್ಟಿ ಜೊತೆ ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಕುಟುಂಬವೂ ಇತ್ತು. ರೈ ಅಪ್ತ ಸಂಬಂಧಿಕರ ಜೊತೆ ಅನುಷ್ಕಾ ಸಾರ್ವಜನಿಕರ ಜೊತೆ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದು ವಿಶೇಷವಾಗಿತ್ತು.ಬಾಹುಬಲಿ- 2 ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ಕೊಲ್ಲೂರಿಗೆ ಭೇಟಿ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಬಾಹುಬಲಿ- 1 ರಿಲೀಸ್ ಸಂದರ್ಭದಲ್ಲಿ ಕೂಡಾ ಅನುಷ್ಕಾ ಶೆಟ್ಟಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದರು.ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಇಒ ಕೃಷ್ಣಮೂರ್ತಿ, ಕೊಲ್ಲೂರಿನ ಅರ್ಚಕರು ಉಪಸ್ಥಿತರಿದ್ದು ನಟಿಗೆ ಗೌರವ ಸಲ್ಲಿಸಿದರು.ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆಇದನ್ನೂ ಓದಿ: 19 ದಿನದಲ್ಲಿ ಬಾಹುಬಲಿಯ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ತಲುಪಿದೆ ಗೊತ್ತಾ?Sign in to your account
Username or Email Address


Password

 Remember Me


