ವಿಜಯಪುರ: ಶೂಟಿಂಗ್ ವೇಳೆ ಹಿರಿಯ ಪೋಷಕ ನಟ ದೊಡ್ಡಣ್ಣ ಅಸ್ವಸ್ಥಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ತೆಲುಗು ಚಿತ್ರದ ಶೂಟಿಂಗ್ ನಡೆಸಲು ಬುಧವಾರ ದೊಡ್ಡಣ್ಣ ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ್ದರು. ನಗರದಿಂದ 40 ಕಿಲೋ ದೂರದ ಸೋಲ್ಹಾಪುರ ರಸ್ತೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಅಸ್ವಸ್ಥಗೊಂಡಿದ್ದು ಈಗ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.ಡಿಹೈಡ್ರೇಷನ್‍ನಿಂದ ಬಳಲುತ್ತಿರುವ ದೊಡ್ಡಣ್ಣ ಚಿತ್ರೀಕರಣದ ವೇಳೆ ಅಲ್ಪ ಉಪಹಾರ ಸೇವಿಸಿದ್ದ ಪರಿಣಾಮ ಅಸ್ವಸ್ಥರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಕಾಲುಗಳು ಊತುಕೊಂಡಿದ್ದು, ಬೆಂಗಳೂರಿಗೆ ಏರ್ ಅಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಲು ದೊಡ್ಡಣ್ಣ ಸಂಬಂಧಿಗಳ ಜೊತೆ ವೈದ್ಯರು ಚರ್ಚೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


