ಶಿವಮೊಗ್ಗ: ಇಲ್ಲಿನ ಕಾಶಿಪುರದಲ್ಲಿರುವ ಕೆನರಾ ಬ್ಯಾಂಕೊಂದು 10 ರೂಪಾಯಿ ಕಾಯಿನ್ ಸ್ವೀಕರಿಸುವುದಿಲ್ಲ ಎಂದು ಗೊಂದಲ ಸೃಷ್ಠಿಸಿ, ಗ್ರಾಹಕರಿಗೆ ಸಮಸ್ಯೆಯನ್ನು ಸೃಷ್ಟಿಸಿದೆ.10 ರೂಪಾಯಿ ಕಾಯಿನ್ ಬ್ಯಾನ್ ಆಗಿಲ್ಲ, ಸ್ಚೀಕರಿಸಬಹುದು ಅಂತ ಆರ್‍ಬಿಐ ನವೆಂಬರ್ 20ರಂದೇ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟವಾಗಿ ಹೇಳಿದೆ. ಆದ್ರೆ, ಆರ್‍ಬಿಐ ಆದೇಶಕ್ಕೆ ಸೆಡ್ಡು ಹೊಡೆದಿರುವ ಕೆನರಾ ಬ್ಯಾಂಕ್ 10 ರೂಪಾಯಿ ನ್ಯಾಣ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.ಇದರಿಂದಾಗಿ 10 ರೂಪಾಯಿ ಕಾಯಿನ್‍ಗಳನ್ನು ಇಟ್ಟುಕೊಂಡಿರುವ ವ್ಯಾಪಾರಸ್ಥರು ಈಗ ಕಂಗಾಲಾಗಿದ್ದಾರೆ. ಗ್ರಾಹಕರಿಂದ 10 ರೂಪಾಯಿ ಸ್ವೀಕರಿಸಬೇಕೋ ಬೇಡವೋ ಎಂಬ ಗೊಂದಲ ಕಾಡುತ್ತಿದೆ ಅಂತಾ ಅಂಗಡಿ ಮಾಲಕ ನೀಲಾ ನಾಯಕ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಅಂತವರ ವಿರುದ್ಧ ದೂರು ಸಲ್ಲಿಸಬಹದು ಎಂದು ಆರ್‍ಬಿಐ ಈ ಹಿಂದೆಯೇ ತಿಳಿಸಿದೆ.Sign in to your account
Username or Email Address


Password

 Remember Me


