ಬೀದರ್: ಪಿಯುಸಿ ಫಲಿತಾಂಶ ನೋಡಿದ ಬಳಿಕ ಮನನೊಂದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರೋ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಮುಚ್ಚಳಾಂಬ ಗ್ರಾಮದಲ್ಲಿ ನಡೆದಿದೆ.ಮಹೇಶ್ ನಾಪತ್ತೆಯಾಗಿರುವ ವಿದ್ಯಾರ್ಥಿ. ಪ್ರತೀ ಬಾರಿಯೂ ಶೇ.90 ಫಲಿತಾಂಶ ತೆಗೆದುಕೊಳ್ಳತ್ತಿದ್ದ ಮಹೇಶ ಈ ಬಾರಿ ಕೆಮಿಸ್ಟ್ರಿ ವಿಷಯದಲ್ಲಿ 13 ಅಂಕ ತೆಗೆದುಕೊಂಡು ಫೇಲಾದ ಕಾರಣ ಮನನೊಂದು ನಾಪತ್ತೆಯಾಗಿದ್ದಾನೆ.ಮಗ ನಾಪತ್ತೆಯಾದ ವಿಷಯ ತಿಳಿದ ತಾಯಿ ಪಾರ್ವತಿ ಊಟ, ನೀರು ಸೇವಿಸದೆ ಎಲ್ಲಿದ್ದರೂ ಓಡಿ ಬಾರೋ ಮಗ. ಅಪ್ಪ ಹಾರ್ಟ್ ಪೇಷೆಂಟ್ ಅಂತಾ ಗೊತ್ತಿಲ್ವೋ ನಿನಗೆ. ನಿನ್ನ ಬಿಟ್ಟು ನಾವಿರಕ್ಕೆ ಸಾಧ್ಯವಾಗ್ತಿಲ್ಲ ಅಂತಾ ತಾಯಿ ಕಣ್ಣೀರಿಡುತ್ತಿದ್ದಾರೆ.ದ್ವಿತೀಯ ಪಿಯುಸಿ ಫಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದು ಕುಟುಂಬಸ್ಥರಲ್ಲಿ ಆಂತಕ ಮನೆ ಮಾಡಿದೆ. ನನ್ನ ಮಗ ಫೇಲಾಗುವ ವಿದ್ಯಾರ್ಥಿಯಲ್ಲ. ಇದು ಪಿಯು ಬೋಡ್9 ಎಡವಟ್ಟಿನಿಂದ ಮಗ ಈಗ ಫೇಲ್ ಆಗಿದ್ದಾನೆ ಎಂದು ತಾಯಿ ಮಾಡುತ್ತಿದ್ದಾರೆ.Sign in to your account
Username or Email Address


Password

 Remember Me


