ಬೆಂಗಳೂರು: ನೇಪಾಳ ಮೂಲದ ಗೃಹಿಣಿ ಮೇಲೆ ನೇಪಾಳಿ ಯುವಕನೇ ಅತ್ಯಾಚಾರವೆಸಗಿ ಕೊಲೆಮಾಡಿರುವ ಘಟನೆ ನಗರದ ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.20 ವರ್ಷದ ಪವಿತ್ರ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆ. ನೇಪಾಳ ಮೂಲದ 26 ವರ್ಷದ ತಿಲಕ್ ಕೃತ್ಯವೆಸಗಿದ ಅರೋಪಿ. ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂಪುರ ಗೇಟ್‍ನ ಟ್ರಿನಿಟಿ ಅಪಾರ್ಟೆಮೆಂಟ್ ಬಳಿ ನಡೆದಿದೆ.ಮೇ 4ರಿಂದ ಪವಿತ್ರಾ ಕಾಣೆಯಾಗಿದ್ದರು. ಪವಿತ್ರಾ ಅವರು ಕಾಣೆಯಾದ ಪತಿ ಕರುಣ್ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು. ಪವಿತ್ರಾ ಪತಿ ಕರುಣ್ ಹಾಗು ತಿಲಕ್ ನೇಪಾಳದಲ್ಲಿ ಪಕ್ಕದ ಊರಿನವರಾಗಿದ್ದು, ಒಂದೇ ಕಡೆ ಇಬ್ಬರೂ ಕೆಲಸ ಮಾಡಿಕೊಂಡಿದ್ದರು. ಆದರೆ ಮೇ 4ರಂದು ಪವಿತ್ರಾ ಅವರು ಕಾಣೆಯಾದ ದಿನಗಳಿಂದ ತಿಲಕ್ ಸಹ ನಾಪತ್ತೆಯಾಗಿದ್ದ.ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ತನಿಖೆಯಲ್ಲಿ ಸಂಶಯಾಸ್ಪದವಾಗಿ ನಾಪತ್ತೆಯಾಗಿದ್ದ ತಿಲಕ್‍ನನ್ನು ಸೋಮವಾರ ಕೋರಮಂಗಲದಲ್ಲಿ ಬಂಧಿಸಿದ್ದರು. ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪವಿತ್ರಾ ಒಂಟಿಯಾಗಿದ್ದ ವೇಳೆ ತಿಲಕ್ ಮನೆಗೆ ನುಗ್ಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ನಂತರ ಪವಿತ್ರಾರ ಮನೆಯ ಕೂಗಳತೆಯ ದೂರದಲ್ಲಿ ಶವವನ್ನು ಹೂತಿಟ್ಟು ಪರಾರಿಯಾಗಿದ್ದ. Sign in to your account
Username or Email Address


Password

 Remember Me


