ಶಿವಮೊಗ್ಗ: ಮಗಳ ನಾಮಕರಣಕ್ಕೆಂದು ಬೈಕ್ ನಲ್ಲಿ ಹೋಗಿ ಹಿಂದಿರುಗುವ ವೇಳೆ ತಂದೆ ಮತ್ತು ಅವರ ಅಣ್ಣ ಇಬ್ಬರೂ ಅಪಘಾತದಲ್ಲಿ ಮೃತಪಟ್ಟ ಘಟನೆ ಶಿವಮೊಗ್ಗ- ಸಾಗರ ರಸ್ತೆಯ ಮುದ್ದಿನಕೊಪ್ಪ ಎಂಬಲ್ಲಿ ನಡೆದಿದೆ.ಶಿಕಾರಿಪುರಕ್ಕೆ ಹೋಗುತ್ತಿದ್ದ ಬಸ್ ಬೈಕಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಲೋಕೇಶ್ ಎಂಬವರು ತನ್ನ ಮೂರು ತಿಂಗಳ ಮಗುವಿನ ನಾಮಕರಣಕ್ಕಾಗಿ ವೀರಗೊಂಡನಹಳ್ಳಿಯಲ್ಲಿರುವ ಹೆಂಡತಿ ಮನೆಗೆ ಹೋಗಿ ಬರುವಾಗ ಈ ದುರಂತ ಸಂಭವಿಸಿದೆ. ಲೋಕೇಶ್ ಜೊತೆ ಅವರ ಅಣ್ಣ ಜಗದೀಶ್ ಕೂಡಾ ಹೋಗಿದ್ದು, ಇಬ್ಬರೂ ಸಹೋದರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಡಿಕ್ಕಿಯಾದ ರಭಸಕ್ಕೆ ಬಸ್ಸಿನ ಟ್ಯಾಂಕರ್ ಗೆ ಬೈಕ್ ತಗುಲಿ ಬೆಂಕಿ ಹತ್ತಿ, ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಬಸ್ಸಿಗೆ ಬೆಂಕಿ ತಗುಲಿದ ತಕ್ಷಣ ಪ್ರಯಾಣಿಕರು ಕೆಳಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸ್ಥಳಕ್ಕೆ ಶಿವಮೊಗ್ಗ ಎಸ್‍ಪಿ ಅಭಿನವ್ ಖರೆ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 







 Advertisement 




Sign in to your account
Username or Email Address


Password

 Remember Me


