ಬೆಂಗಳೂರು: ಭಾನುವಾರ ಬೆಳಗ್ಗೆ ಹಿರಿಯ ಪತ್ರಕರ್ತ ಗರುಡನಗರಿ ನಾಗರಾಜ್ (84) ಅವರು ನಗರದ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ರಾಜ್ಯ ಪ್ರಶಸ್ತಿ ವಿಜೇತ ನಾಗರಾಜ್ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ನಾಗರಾಜ್ ಅವರು 20 ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ ದೇಶದ ಮೊದಲ ಪತ್ರಕರ್ತ ಎಂಬ ಬಿರುದಿಗೆ ಭಾಜನರಾಗಿದ್ದರು.ನಾಗರಾಜ್ ಅವರು ಹಾಸನ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದರು. ಇನ್ನು ತಮ್ಮ ವೃತ್ತಿ ಬದುಕಿನಲ್ಲಿ ಹಲವು ಕನ್ನಡ ಪತ್ರಿಕೆಗಳಿಗೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇಂದು ಜೆಪಿ ನಗರದಲ್ಲಿಯ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗುವುದು.pic.twitter.com/XBe0KvV5Db— Pratap Simha (@mepratap) May 14, 2017Sign in to your account
Username or Email Address


Password

 Remember Me


