ತುಮಕೂರು: ಆರತಕ್ಷತೆಯಲ್ಲಿ ಊಟ ಸೇವಿಸಿ ಸುಮಾರು 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ತುಮಕೂರು ತಾಲೂಕಿನ ಮಲ್ಲೆನಳ್ಳಿಯಲ್ಲಿ ನಡೆದಿದೆ.ಮಲ್ಲೆನಳ್ಳಿ ನಿವಾಸಿಗಳಾದ ರಮೇಶ್ ಮತ್ತು ವೀಣಾ ಎಂಬವರ ಮದುವೆ ಶುಕ್ರವಾರ ನಡೆದಿತ್ತು. ಶನಿವಾರ ಆರತಕ್ಷತೆ ಇಟ್ಟುಕೊಂಡಿದ್ರು. ಹೀಗಾಗಿ ಇಲ್ಲಿ ಊಟ ಮಾಡಿದ 30ಕ್ಕೂ ಹೆಚ್ಚು ಜನರು ಅಸ್ವಸ್ಥ ಗೊಂಡಿದ್ದಾರೆ.ಅನ್ನ ಸಾಂಬಾರ್, ಪಾಯಸ, ಚಿತ್ರಾನ್ನ ಸೇರಿದಂತೆ ವಿವಿಧ ರೀತಿಯ ಆಹಾರ ಸೇವಿಸಿದ್ದಾರೆ. ಊಟ ಮಾಡುತ್ತಿದ್ದಂತೆ ಕೆಲವರಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಶನಿವಾರ ರಾತ್ರಿಯೇ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.ಈ ಸಂಬಂಧ ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


