ಬೆಂಗಳೂರು: ಅತಿವೇಗದಿಂದ ಬಂದ ಬಿಎಂಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.ಬನ್ನೇರುಘಟ್ಟದಿಂದ ಮೆಜೆಸ್ಟಿಕ್ ಕಡೆಗೆ ಹೊರಟಿದ್ದ ಬಸ್ ಬೆಂಗಳೂರಿನ ರಿಚ್‍ಮಂಡ್ ಸರ್ಕಲ್ ಫ್ಲೈಓವರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಪ್ರಯಾಣಿಕರಿಗೆ ಗಂಭೀರ ಸ್ಪರೂಪದ ಗಾಯಗಳಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಾಲಕನ ಅಜಾಗರೂಕತೆಯಿಂದ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಮಳೆ ಬಂದಿರುವುದರಿಂದ ಡಿವೈಡರ್ ಕಾಣದೆ ಈ ಅಪಘಾತವಾಗಿದೆ. ಡಿವೈಡರ್ ಗಳು ಕಾಣುವಂತೆ ಪೈಂಟ್ ಮಾಡಬೇಕು ಆಗ ಇಂತಹ ಅನಾಹುತಗಳು ತಪ್ಪುತ್ತದೆ ಅಂತಾ ಪ್ರತಕ್ಷ್ಯದರ್ಶಿಯೊಬ್ಬರು ಹೇಳಿದ್ದಾರೆ.ಈ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


