ಕಲಬುರಗಿ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ ಮೂರು ದಿನಗಳು ಕಳೆದಿವೆ. ಆದರೆ ಜಲ್ಲೆಯ ಚಿಂಚೋಳಿ ತಾಲೂಕಿನ ರಾಯಕೋಡ ಗ್ರಾಮದ ಶಾಲೆಯಲ್ಲಿ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ.ಈ ಶಾಲೆಯ ಶಿಕ್ಷಕರಿಬ್ಬರೂ ಹೆಡ್‍ಮಾಸ್ಟರ್ ನಾನಲ್ಲ ಅಂತ ಕಚ್ಚಾಡಿಕೊಂಡು ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಆಡ್ತಿದ್ದಾರೆ. ಕಷ್ಟಪಟ್ಟು ಓದಿರೋ ಮಕ್ಕಳು ಕೆಲವೇ ಅಂಕಗಳಲ್ಲಿ ಫೇಲಾಗಿದ್ದಾರಂತೆ. ಹೀಗಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಪರದಾಡುತ್ತಿದ್ದಾರೆ.ಈ ಶಾಲೆಗೆ ಹಿಂದೆ ರಾಜಕುಮಾರ ಎಂಬವರು ಮುಖ್ಯೋಪಾಧ್ಯಾಯರಾಗಿದ್ದರು. 4 ತಿಂಗಳು ಹಿಂದೆ ವರ್ಗಾವಣೆಯಾಗಿ ಬೇರೊಂದು ಶಾಲೆಗೆ ಹೋಗಿದ್ದಾರೆ. ಅಂದಿನಿಂದ ಏಪ್ರಿಲ್ 10ರವರೆಗೆ ಶಿಕ್ಷಣ ಇಲಾಖೆ ಪ್ರಭಾರಿ ಮುಖ್ಯಗುರುಗಳಾಗಿ ಲಿಂಗಣ್ಣ ಅವರನ್ನು ನೇಮಕ ಮಾಡಿದೆ. ಆದ್ರೆ ಅವರು ಸಹ ನೇಮಕವಾದ ದಿನದಿಂದ ಶಾಲೆಯತ್ತ ಮುಖ ಮಾಡಿಲ್ಲ.ಇಲ್ಲಿನ ಶಿಕ್ಷಕರಿಗೂ ಸಹ 4 ತಿಂಗಳಿನಿಂದ ಸಂಬಳವಾಗಿಲ್ಲ. ಈ ಕುರಿತು ಶಿಕ್ಷಣ ಇಲಾಖೆಗೆ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಗ್ರಾಮಸ್ಥರು ದೂರು ನೀಡಿದ್ದರೂ ಇಲಾಖೆ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. Sign in to your account
Username or Email Address


Password

 Remember Me


