ವಿಜಯಪುರ/ ಉತ್ತರಕನ್ನಡ: ಸಿಡಿಲು ಬಡಿದು ಒಂದೂವರೆ ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಮದೀನಾ ಕಾಲೋನಿಯ ಫಿರದೋಸ್ ನಗರದಲ್ಲಿ ನಡೆದಿದೆ.22 ವರ್ಷದ ಬೀಬಿ ಸುಫಿಯಾ ಮೃತ ಗರ್ಭಿಣಿ. ಘಟನೆಯಲ್ಲಿ 19 ವರ್ಷದ ಮುಬಾರಕ್ ಹಾಗೂ 6 ವರ್ಷದ ಮಹಮದ್ ಕೈಫ್ ಎಂಬವರು ಗಾಯಗೊಂಡಿದ್ದಾರೆ. ಮನೆಯಲ್ಲಿ ಇದ್ದಾಗ ಸಿಡಿಲು ಬಡಿದು ಈ ಘಟನೆ ಸಂಭವಿಸಿದ್ದು ಗಾಯಾಳುಗಳಿಗೆ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೃತ ಮಹಿಳೆ 8 ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಜಾಕಿರ್ ಎಂಬವರನ್ನ ವಿವಾಹವಾಗಿದ್ದು, ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದರು. ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ವಿಜಯಪುರ ಜಿಲ್ಲೆಯಲ್ಲಿಯೂ ಭಾನುವಾರ ತಡರಾತ್ರಿ ಮಳೆಯಾಗಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬನವಾಸಿ-ಗೋನಾಳ ಗ್ರಾಮಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದ್ದಿರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮುದ್ದೇಬಿಹಾಳ ತಾಲೂಕಿನ ಸರೂರು, ತಂಗಡಗಿ, ನೇಬಗೇರಿ, ಹಿರೇಮುರಾಳ, ಕೊಳೂರು, ಬಸರಕೋಡ, ಗೆದ್ದಲಮರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಾಗಿದೆ. ಇನ್ನೂ ಕೆಲವು ಕಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. Sign in to your account
Username or Email Address


Password

 Remember Me


