ಗದಗ: ನಾಲ್ಕು ಗ್ರಾಮಗಳ ಜನರ ಮೇಲೆ ತೋಳಗಳು ದಾಳಿ ನಡೆಸಿರೋ ಘಟನೆಯೊಂದು ಬೆಳಕಿಗೆ ಬಂದಿದೆ.ಗದಗ ತಾಲೂಕು ಹಾಗೂ ರೋಣ ತಾಲೂಕಿನ ಹುಯಿಲಗೋಳ, ಕುರುಡಗಿ, ಗುಜಮಾಗಡಿ, ಯರೇಬೇಲೆರಿ ಗ್ರಾಮಗಳಿಗೆ ಶನಿವಾರ ತಡರಾತ್ರಿ ತೋಳಗಳು ನುಗ್ಗಿದ್ದು, ಗ್ರಾಮದ ಜನರ ಮೇಲೆ ದಾಳಿ ನಡೆಸಿವೆ. 21 ಜನ್ರಿಗೆ ಗಾಯಗಳಾಗಿದ್ದು, ಇದರಲ್ಲಿ ಓರ್ವ ಅಜ್ಜಿ ಸೇರಿ 6 ಜನರ ಸ್ಥಿತಿ ಗಂಭೀರವಾಗಿದೆ.ಗದಗ ತಾಲೂಕಿನ ಹುಯಿಲಗೋಳದಲ್ಲಿ 3, ರೋಣ ತಾಲೂಕಿನ ಗುಜಮಾಗಡಿಯಲ್ಲಿ 9, ಯರೇಬೇಲೆರಿಯಲ್ಲಿ 8 ಹಾಗೂ ಕುರುಡಗಿಯಲ್ಲಿ 5 ಜನರ ಮೇಲೆ ತೋಳಗಳು ದಾಳಿ ನಡೆಸಿವೆ. ಸದ್ಯ ಗಾಯಾಳುಗಳಿಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಘಟನೆಯ ಬಳಿಕ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ತೋಳ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.Sign in to your account
Username or Email Address


Password

 Remember Me


