ಬೆಂಗಳೂರು: ರಣಭೀಕರ ಬರದಿಂದ ತತ್ತರಿಸಿ ಹೋಗಿರುವ ರೈತ ಸಮುದಾಯಕ್ಕೆ ಸಂತಸದ ಸುದ್ದಿ. ಈ ಬಾರಿಯ ಮುಂಗಾರು ನಿಗದಿತ ಅವಧಿಗೂ ಮುನ್ನವೇ ರಾಜ್ಯ ಪ್ರವೇಶಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮುಂಗಾರು ಮಾರುತಗಳು ಸೋಮವಾರದಂದು ಬಂಗಾಳಕೊಲ್ಲಿಯ ಅಂಡಮಾನ್ ದ್ವೀಪ ಪ್ರವೇಶಿಸಲಿದೆ. ಸಾಮಾನ್ಯವಾಗಿ ನೈಋತ್ಯ ಮಾರುತಗಳು ಜೂನ್ 1ರಂದು ಕೇರಳ ಪ್ರವೇಶಿಸಬೇಕು. ಆದ್ರೆ ಈ ಬಾರಿ ಮೇ 25ಕ್ಕೇ ಮೊದಲ ಮುಂಗಾರಿನ ಸಿಂಚನವಾಗಲಿದೆ.ಇದೇ ತಿಂಗಳು ಮೇ 29ರಂದು ಮುಂಗಾರು ಮಾರುತಗಳು ರಾಜ್ಯಕ್ಕೆ ಎಂಟ್ರಿಯಾಗುವ ಸಾಧ್ಯತೆಗಳಿವೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. Sign in to your account
Username or Email Address


Password

 Remember Me


