ವಿಜಯಪುರ: ಹಣ ಅಂದ್ರೆ ಹೆಣವೂ ಬಾಯ್ಬಿಡುತ್ತೆ ಅನ್ನೋ ಮಾತಿದೆ. ಪ್ರಭಾವಿ ಸಚಿವರಾಗಿರುವ ಎಂಬಿ ಪಾಟೀಲ್ ಜಿಲ್ಲೆಯಲ್ಲಿ ಹಣ ಇಲ್ಲಾಂದ್ರೆ ಏನೂ ಆಗಲ್ಲ. ಆಸ್ಪತ್ರೆಯಲ್ಲಿ ಸತ್ತಿರುವ ಶವನೂ ಹೊರಗೆ ಹೋಗಲ್ಲ.ಹೌದು. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ಶವಾಗಾರದ ಸಹಾಯಕ ಈರಣ್ಣನ ಕೈಬಿಸಿ ಮಾಡಿಲ್ಲ ಅಂದ್ರೆ ಸರ್ಕಾರಿ ಶವಗಾರದಿಂದ ಒಂದೇ ಒಂದು ಹೆಣವೂ ಹೊರಗೆ ಹೋಗಲ್ಲ. ದುಡ್ಡು ಕೊಡಿ ಸ್ವಾಮಿ ಅಂತಾ ನಾಚಿಕೆ ಮಾನ-ಮರ್ಯಾದೆ ಇಲ್ಲದೇ ಬಾಯ್ಬಿಟ್ಟು ಕೇಳ್ತಾನೆ. ಒಂದು ಹೆಣಕ್ಕೆ ಕಮ್ಮಿಯಂದ್ರೂ ಎರಡರಿಂದ ನಾಲ್ಕು ಸಾವಿರ ರೂ. ಕೊಡ್ಲೇಬೇಕು.ಈರಣ್ಣ ಸೊಲ್ಹಾಪುರ ಮೂಲದವರಿಂದ ಲಂಚ ಪೀಕ್ತಿರುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೃತನ ಕುಟುಂಬಸ್ಥರು ಸಾವಿನ ಶೋಕದಲ್ಲಿ ಕಣ್ಣೀರು ಹಾಕ್ತಿದ್ರೆ ಅತ್ತ ಹೇಗೋ ನನ್ನ ಜೇಬು ತುಂಬ್ತಲ್ಲ ಬಿಡಿ ಅನ್ನೋ ಖುಷಿ ಈರಣ್ಣನದ್ದು.ಯಾವಾಗ ಈರಣ್ಣನ ಭ್ರಷ್ಟಾಚಾರದ ವೀಡಿಯೋದಲ್ಲಿ ಸೆರೆ ಆಯ್ತೋ ಈಗ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಚಾವ್ಹಾಣ್ ಸಮಜಾಯಿಷಿ ಕೊಟ್ಟಿದ್ದಾರೆ.Sign in to your account
Username or Email Address


Password

 Remember Me


