ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ ಸ್ಥಳಕ್ಕೆ ಬರಬೇಕು ಹಾಗೂ ಫ್ರೀ ಡ್ರಿಂಕ್ಸ್, ಸಿಗರೇಟ್ ಬೇಕು ಅಂತ ಮಾನಸಿಕ ಅಸ್ವಸ್ಥನೊಬ್ಬ ನೀರಿನ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯದ ಮಳ್ಳವಳ್ಳಿ ತಾಲೂಕಿನ ಅಂಕನಹಳ್ಳಿಯಲ್ಲಿ ಪ್ರಸನ್ನ ಎಂಬಾತ ವಿಚಿತ್ರ ಪ್ರತಿಭಟನೆ ಮೂಲಕ ಆತಂಕ ಸೃಷ್ಟಿಸಿದ್ದಾನೆ. ಇಂದು ಬೆಳ್ಳಂಬೆಳಗ್ಗೆ ನೀರಿನ ಟ್ಯಾಂಕ್ ಮೇಲೆ ಅರೆ ಬೆತ್ತಲಾಗಿ ಹತ್ತಿದ ಯುವಕ ಮದ್ಯ, ಸಿಗರೇಟ್ ಕೊಡದಿದ್ರೆ ಮೇಲಿಂದ ಜಿಗಿಯುತ್ತೀನಿ ಅಂತ ಬೆದರಿಕೆ ಹಾಕಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಯುವಕನನ್ನ ಎಷ್ಟೇ ಮನವೊಲಿಸಿದ್ರೂ ಕೆಳಗಿಳಿಯಲಿಲ್ಲ.ಕಡೆಗೆ ಅವನ ಬೇಡಿಕೆ ಈಡೇರಿಸೋದಾಗಿ ಹೇಳಿ ಉಪಾಯವಾಗಿ ಟ್ಯಾಂಕ್ ಮೇಲೆ ಹತ್ತಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.Sign in to your account
Username or Email Address


Password

 Remember Me


