ಕೊಪ್ಪಳ: ಕರ್ತವ್ಯ ನಿರತ ಸರ್ಕಾರಿ ಬಸ್ ಚಾಲಕರೊಬ್ಬರು ಹೃದಯಘಾತದಿಂದ ಸಾವಿಗೀಡಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.ಕುಷ್ಟಗಿ ಬಸ್ ಡಿಪೋದಲ್ಲಿ ಈ ಘಟನೆ ನಡೆದಿದೆ. 45 ವರ್ಷದ ಕಿರಣ್ ಕುಮಾರ ಯಾದಗಿರಿ ಮೃತ ಚಾಲಕ. ಇವರು ಬಾಗಲಕೋಟೆ ಮೂಲದವರು ಅಂತ ತಿಳಿದುಬಂದಿದೆ.ಕುಷ್ಟಗಿ ಡಿಪೋದಲ್ಲಿ ಬಸ್ ನಿಲ್ಲಿಸಿ ವಿಶ್ರಾಂತಿಗೆ ತೆರಳುವಾಗ ಕಿರಣ್ ಅವರಿಗೆ ಹೃದಯಾಘಾತವಾಗಿದೆ. ಕುಷ್ಟಗಿ- ಬೆಂಗಳೂರು ಬಸ್ ಚಾಲಕರಾಗಿರೋ ಇವರು ಬೆಂಗಳೂರಿನಿಂದ ಕುಷ್ಟಗಿ ಡ್ಯೂಟಿ ಮುಗಿಸಿದ ಬಳಿಕ ಹೃದಯಾಘಾತವಾಗಿದೆ. ಕಿರಣ್ ಅವರ ಸಾವಿನ ಸುದ್ದಿ ತಿಳಿದ ಚಾಲಕರು ಹಾಗೂ ನಿರ್ವಾಹಕರು ಮಮ್ಮಲ ಮರುಗಿದ್ದಾರೆ. Sign in to your account
Username or Email Address


Password

 Remember Me


