ಶಿವಮೊಗ್ಗ: ನಾವು ಮಾತು ತಪ್ಪಿದ್ರೆ ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕಬೇಕಿತ್ತು. ನಿಮಗೆ ಗೊತ್ತಲ್ಲಾ ನಾವು ಎಂತಹವರು ಅಂತಾ? ಒಂದೋ ನಾವು ಸಾಯಬೇಕು ಇಲ್ಲಾ ಅವರು ಸಾಯಬೇಕು ಎನ್ನುತ್ತ ಶಿವಮೊಗ್ಗದಲ್ಲಿ (Shivamogga) ಕಲ್ಲುತೂರಾಟಕ್ಕೆ (Stone Pelting) ಸಂಬಂಧಿಸಿದಂತೆ ಕಿಡಿಗೇಡಿಯೊಬ್ಬ ಪೊಲೀಸರಿಗೆ (Police)  ಆವಾಜ್ ಹಾಕಿರುವ ವೀಡಿಯೋ ತುಣುಕೊಂದು ಇದೀಗ ಬೆಳಕಿಗೆ ಬಂದಿದೆ.ಶಿವಮೊಗ್ಗದ ರಾಗಿಗುಡ್ಡದಲ್ಲಿ (Ragigudda) ಶನಿವಾರ ಈದ್ ಮಿಲಾದ್ ಮೆರವಣಿಗೆ ವೇಳೆ ಉದ್ವಿಗ್ನತೆ ಉಂಟಾಗಿತ್ತು. ಕಲ್ಲುತೂರಾಟ, ಗಲಾಟೆ ಆರಂಭವಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಮನೆ, ವಾಹನಗಳ ಮೇಲೆ ದಾಳಿ ಮಾಡಿದ್ದರು. ಗುಂಪುಗೂಡಿ ಮನೆಗಳು ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೂ ದಾಳಿ ನಡೆಸಿದ್ದರು.ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು. ಈ ಘಟನೆ ರಾತ್ರಿ ನಡೆದಿದ್ದರೆ ಅಂದು ಸಂಜೆ ಪುಂಡ ಯುವಕರು ಪೊಲೀಸರಿಗೆ ಅವಾಜ್ ಹಾಕಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಅದೇ ಯುವಕರು ತಮ್ಮ ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿರುವುದು ಬೇರೆ ವೀಡಿಯೋಗಳಲ್ಲಿಯೂ ಕಾಣಿಸಿಕೊಂಡಿದೆ. ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?ನಿಮಗೆ ಬೆಲೆ ಕೊಟ್ಟು ನಾವು ಏನೂ ಮಾಡಿಲ್ಲ. ನಾವು ಗಣಪತಿ ಹಬ್ಬಕ್ಕೂ ಏನೂ ಮಾಡಿಲ್ಲ. ನಾವು ಮಾತು ತಪ್ಪಿದ್ರೆ ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕಬೇಕಿತ್ತು. ನಿಮಗೆ ಗೊತ್ತಲ್ಲಾ ನಾವು ಎಂತಹವರು ಅಂತಾ? ನಾವು ಸಾಯಬೇಕು ಇಲ್ಲವೇ ಅವರು ಸಾಯಬೇಕು ಎಂದು ಪೊಲೀಸರಿಗೇ ಯುವಕನೊಬ್ಬ ಆವಾಜ್ ಹಾಕಿರುವುದು ವೀಡಿಯೋದಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ – ವರ್ತಕರು, ಬಿಜೆಪಿ ಮುಖಂಡರು ವಿರೋಧWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


