ಬಳ್ಳಾರಿ: ವಿಜಯನಗರ (Vijayanagara) ಸಾಮ್ರಾಜ್ಯದ ಅರಸರು ಸಾವಿರಾರು ವರ್ಷ ಹಂಪಿಯನ್ನೇ (Hampi) ರಾಜಧಾನಿಯನ್ನಾಗಿಸಿಕೊಂಡು ಆಡಳಿತ ಮಾಡಿದ್ದಾರೆ. ರಾಜ ಮಹಾರಾಜರು ಆಡಳಿತ ನಡೆಸಿದ್ದಕ್ಕೆ ಅನೇಕ ಕುರುಹುಗಳನ್ನು ಬಿಟ್ಟು ಹೋಗಿದ್ದಾರೆ.ಕ್ರಿ.ಪೂ. 3,000 ವರ್ಷಗಳ ಹಿಂದೆ ಆದಿಮಾನವರು ಇದ್ದರು ಎಂದು ನಮ್ಮ ಇತಿಹಾಸ, ಪುರಾಣಗಳಲ್ಲಿ ಉಲ್ಲೇಖಗಳು ಇವೆ. ಅದಕ್ಕೆ ಪುಷ್ಟಿ ನೀಡುವಂತಹ ಜೊತೆಗೆ ಆದಿಮಾನವರೇ ಕೆತ್ತಿದ್ದಾರೆ ಎನ್ನುವುದಕ್ಕೆ ನೂರಾರು ಕುರುಹುಗಳು ವಿಜಯನಗರ ಜಿಲ್ಲೆಯಲ್ಲಿ ಪತ್ತೆಯಾಗಿವೆ.ವಿಶ್ವ ಪಾರಂಪರಿಕ ತಾಣ ಹಂಪಿಯಿಂದ 12 ಕಿ.ಮೀ. ದೂರದ ಹೊಸಪೇಟೆ-ಬಳ್ಳಾರಿ ಹೆದ್ದಾರಿಯ ಪಾಪಿನಾಯಕನಹಳ್ಳಿಯ ಕರಿಕಲ್ಲು ಗುಡ್ಡದಲ್ಲಿ ಆದಿಮಾನವರು ಒಂದೇ ಕಡೆ ಗುಂಪಾಗಿ ನೆಲೆಸಿರುವ ಕುರುಹುಗಳು ಪತ್ತೆಯಾಗಿದೆ. ಬಂಡೆಗಳಲ್ಲಿನ ಕುಟ್ಟು ರೇಖಾಚಿತ್ರಗಳು ಕ್ರಿ.ಪೂ. 3,000 ವರ್ಷಗಳ ಮಾನವ ಜೀವನದ ಶೈಲಿಯ ಮೇಲೆ ಬೆಳಕು ಚೆಲ್ಲಿದೆ. ಇದನ್ನೂ ಓದಿ: ನಾವು ಎಂತವರು ಗೊತ್ತಲ್ಲಾ.. ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕ್ಬೇಕಿತ್ತು: ಪೊಲೀಸರಿಗೆ ಕಿಡಿಗೇಡಿಯಿಂದ ಆವಾಜ್ಗ್ರಾಮದ ಅಂಕಾಲಮ್ಮ ದೇಗುಲದ ಹಿಂಭಾಗದಲ್ಲಿ ಈ ಕರಿಕಲ್ಲು ಗುಡ್ಡ ಇದ್ದು, ಶಿಲಾಯುಗದ ಕುರುಹುಗಳ ಕುರಿತು ಅಧ್ಯಯನ ನಡೆಸುತ್ತಿರುವ ‘ವಿಜಯನಗರ ತಿರುಗಾಟ ಸಂಶೋಧನಾ ತಂಡ’ ಈ ಮಹತ್ವದ ಶೋಧನೆ ನಡೆಸಿದೆ. ಈ ಗುಡ್ಡದ ಬುಡದಿಂದ ತುದಿಯವರೆಗೆ 150ಕ್ಕೂ ಅಧಿಕ ಕುಟ್ಟು ರೇಖಾಚಿತ್ರಗಳನ್ನು ಪತ್ತೆಹಚ್ಚಿದೆ.ಹಸು, ಜಿಂಕೆ, ಗೂಳಿ, ನಾಯಿ, ಹಂದಿ ಚಿತ್ರಗಳಲ್ಲದೆ, ಪ್ರಾಣಿಗಳ ಮೇಲೆ ಕುಳಿತುಕೊಂಡು, ಕೈಯಲ್ಲಿ ಬಿಲ್ಲು ಹಿಡಿದ ಮನುಷ್ಯ ಬೇಟೆಯಾಡುವ ಚಿತ್ರ, ಇಬ್ಬರು ಮನುಷ್ಯರು ನೃತ್ಯ ಮಾಡುವ ಚಿತ್ರ, ದೀರ್ಘ ಕೊಂಬಿನ ಹಸುವಿನ ಕುಟ್ಟು ಚಿತ್ರಗಳು ಪತ್ತೆಯಾಗಿವೆ. ಇದನ್ನೂ ಓದಿ: ಬಾಲ್ಯ ವಿವಾಹದ ವಿರುದ್ಧ ಸಮರ – ಮತ್ತೆ 800ಕ್ಕೂ ಅಧಿಕ ಮಂದಿಯ ಬಂಧನWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


