ಬಾಗಲಕೋಟೆ: ಜೆಸಿಬಿ ಹರಿದು 1 ವರ್ಷ 4 ತಿಂಗಳ ಮಗುವೊಂದು ಸಾವನ್ನಪ್ಪಿದ ದಾರುಣ ಘಟನೆ ಮುಧೋಳ ನಗರದ ಹೌಸಿಂಗ್ ಕಾಲೋನಿಯಲ್ಲಿ ನಡೆದಿದೆ.ನಗರದ ಪರಮಾನಂದ್ ಸೈದಾಪುರ ಅವರ ಪುತ್ರಿ ಕೀರ್ತಿ ಮೃತ ದುರ್ದೈವಿ. ಬಿಸಿಲಿನ ಝಳಕ್ಕೆ ಮರದ ಕೆಳಗೆ ಮಲಗಿಸಿದ್ದ ಸಂದರ್ಭದಲ್ಲಿ ಮಗುವಿನ ಮೇಲೆ ಜೆಸಿಬಿ ಹರಿದು ಈ ಅವಘಡ ಸಂಭವಿಸಿದೆ.ಸ್ಥಳಕ್ಕೆ ಮುಧೋಳ ಪಿಎಸ್‍ಐ ಸಂತೋಷ ಹಳ್ಳೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


