ಬೆಂಗಳೂರು: ಸಿನಿಮಾ ನಟಿಯರ ವಿಚಾರದಲ್ಲಿ ವಿಕೃತಿಗೈಯ್ಯುತ್ತಿರುವವರ ವಿರುದ್ಧ ನಟಿ ಶೃತಿ ಹರಿಹರನ್ ಹೋರಾಟಕ್ಕಿಳಿದಿದ್ದಾರೆ.ಮಹಿಳೆಯರ ಅಶ್ಲೀಲ ಫೋಟೋಗಳಿಗೆ ತಮ್ಮ ಫೋಟೋಗಳನ್ನು ಅಂಟಿಸಿ ಇಂಟರ್‍ನೆಟ್‍ನಲ್ಲಿ ಹರಿಬಿಟ್ಟಿರುವ ವಿಕೃತ ಕಾಮಿಗಳ ವಿರುದ್ಧ ಶೃತಿ ಹರಿಹರನ್ ಪೊಲೀಸರಿಗೆ ದೂರು ನೀಡಿದ್ದಾರೆ. ಗುರುವಾರದಂದು ನಟಿ ಶೃತಿ ಹರಿಹರನ್ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂಗೆ ದೂರು ನೀಡಿದ್ರು. ಮಹಿಳೆಯ ಮಾನ ರಕ್ಷಣೆ ಮಾಡುವಂತೆ ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ರು.ಇದೇ ರೀತಿ ಹಲವಾರು ನಟಿಯರ ಫೋಟೋಗಳಿಗೆ ವಿಕೃತಿಗೈದು ಇಂಟರ್‍ನೆಟ್‍ನಲ್ಲಿ ಹಾಕಿದ್ದು ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಶೃತಿ ಹರಿಹರನ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


