ಚಿಕ್ಕಮಗಳೂರು: ಮಧ್ಯರಾತ್ರಿ ಅಕ್ರಮವಾಗಿ ಮರಳು ತುಂಬುವಾಗ ದಿಬ್ಬ ಕುಸಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗಾಪುರದಲ್ಲಿ ನಡೆದಿದೆ.ಮೃತರನ್ನ ತಾಲೂಕಿನ ಗೇರಮರಡಿ ನಿವಾಸಿಗಳಾದ 23-24ರ ಹರೆಯದ ಮಂಜುನಾಥ್, ನವೀನ್ ಹಾಗೂ ಅರುಣ್ ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು ತರೀಕೆರೆಗೆ ಬಂದು ವಾಸವಿದ್ದರು.ಬುಧವಾರ ಮಧ್ಯರಾತ್ರಿ ರಂಗಾಪರುದ ಬಳಿ ಒಣಗಿದ ಕೆರೆಯೊಂದರಲ್ಲಿ ಎಂಟು ಜನರ ತಂಡ ಬಂದಿದ್ದು, ಟ್ರ್ಯಾಕ್ಟರ್ ನಲ್ಲಿ ಮರಳು ತೆಗೆಯುವಾಗ ಈ ಅವಘಡ ನಡೆದಿದೆ. ಎಲ್ಲರ ಮೇಲೂ ದಿಬ್ಬ ಕುಸಿದಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇಬ್ಬರ ಸ್ಥಿತಿ ಗಂಭೀರಗೊಂಡಿದ್ದು ತರೀಕೆರೆ ಸರ್ಕಾರ ಆಸ್ಪತ್ರೆಗೆ ದಾಖಲಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್ ವಶಪಡಿಸಿಕೊಂಡಿರೋ ಪೊಲೀಸರು ತಲೆಮರೆಸಿಕೊಂಡಿರೋ ಟ್ರ್ಯಾಕ್ಟರ್ ಮಾಲೀಕ ರವಿ ಹಾಗೂ ಅಕ್ರಮ ಮರಳುಗಾರಿಕೆ ನಡೆಸ್ತಿದ್ದ ಆನಂದ್ ಎಂಬುವರಿಗೆ ಹುಡುಕಾಟ ನಡೆಸ್ತಿದ್ದಾರೆ.Sign in to your account
Username or Email Address


Password

 Remember Me


