ಮಂಡ್ಯ: ಬೇರೊಬ್ಬನ ಜೊತೆ ಮದುವೆ ಮಾಡಲು ವರ ನೋಡಿದ್ದ ವಿಚಾರ ತಿಳಿದ ಯುವತಿ ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇತ್ತ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ.ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿ ಹೆಚ್.ಕ್ಯಾತನಹಳ್ಳಿಯ ಯದುಕುಮಾರ್ ಮತ್ತು ಗಾಯಿತ್ರಿ ಎಂಬ ದಂಪತಿಗಳ ಚಾಂದಿನಿ ಎಂಬ 17.5 ವರ್ಷದ ಅಪ್ರಾಪ್ತ ವಯಸ್ಸಿನ ಮಗಳೇ, ನೇಣಿಗೆ ಶರಣಾಗಿರುವ ದುರ್ದೈವಿ.ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ. ಮನೆಯಲ್ಲಿ ಮದುವೆ ಮಾಡುವ ಉದ್ದೇಶದಿಂದ ವರನೊಬ್ಬನನ್ನು ನೋಡಿದ್ದರು. ಈ ವಿಷಯ ತಿಳಿದ ಪಿಯುಸಿ ಕಾಲೇಜಿನ ಪ್ರೇಮಿ ವಿವೇಕ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪ್ರೀತಿಯ ವಿಷಯ ತಿಳಿದ ಹುಡುಗನ ಪೋಷಕರು ಹುಡುಗಿಯ ಮನೆ ಬಳಿ ಬಂದು ವಿಷಯ ತಿಳಿಸಿದ್ದಾರೆ.ವಿಷಯ ತಿಳಿದ ಹುಡುಗಿಯ ಪೋಷಕರು ಮನೆಯಲ್ಲಿ ಮೇ.6 ರಾತ್ರಿ ಜಗಳ ಮಾಡಿದ ಕಾರಣ ಯುವತಿ ನೇಣಿಗೆ ಶರಣಾಗಿದ್ದಾಳೆ. ಆದ್ರೆ ಪೊಲೀಸರಿಗೆ ವಿಷಯ ತಿಳಿಸದೆ ಮೇ.7 ರಂದು ಯುವತಿಯನ್ನು ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆದ್ರೆ ಇದೀಗ ಮರ್ಯಾದಾ ಹತ್ಯೆವೆಂದು ಶಂಕಿಸಿಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ಚನ್ನರಾಯಪಟ್ಟಣ ತಾಲೂಕು, ಕುಂಬೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ.Sign in to your account
Username or Email Address


Password

 Remember Me


