ಮೈಸೂರು: ಕಾಂಗ್ರೆಸ್ ತೊರೆಯಲು ತುದಿಗಾಲಲ್ಲಿ ನಿಂತಿರುವ ಮಾಜಿ ಸಂಸದ ಎಚ್. ವಿಶ್ವನಾಥ್ ಜೊತೆ ಯಾವುದೇ ಮಾತುಕತೆ, ಸಂಧಾನ ನಡೆಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.ಮೈಸೂರಿನಲ್ಲಿ ಮಾತನಾಡಿದ ಸಿಎಂ, ವಿಶ್ವನಾಥ್ ಕೂಡ ನನ್ನ ಜೊತೆ ಮಾತಾಡಿಲ್ಲ. ನಾನೂ ಕೂಡ ವಿಶ್ವನಾಥ್ ಜೊತೆ ಮಾತಾಡಲ್ಲ. ಅವರ ರಾಜಕೀಯ ನಡೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದರು.ತಮ್ಮ ವರ್ತನೆ ಸರಿ ಇಲ್ಲ ಎಂದು ವಿಶ್ವನಾಥ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ವರ್ತನೆ, ನಡವಳಿಕೆ ಸರಿ ಇದೆಯೋ ಇಲ್ಲವೋ ಎಂಬುದನ್ನು ಹೈಕಮಾಂಡ್ ಹೇಳುತ್ತೆ. ನನ್ನ ಮೇಲೆ ವಿಶ್ವನಾಥ್ ಮಾಡಿರುವ ಆರೋಪಗಳಿಗೆ ನೋ ಕಾಮೆಂಟ್ಸ್ ಅಂದ್ರು.ಇದೇ ವೇಳೆ ಅವರು, ತಮ್ಮ ಪುತ್ರ ಡಾ. ಯತೀಂದ್ರ ವಿರುದ್ಧ ಅದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಾಗಿರೋ ಬಗ್ಗೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತವಾದ ಸುಳ್ಳು ದೂರು. ನನ್ನ ಮಗ ಮೊದಲ ವಿದೇಶ ಪ್ರವಾಸ ಮಾಡಿದ್ದಾನೆ. ಮೊದಲ ಪ್ರವಾಸದಲ್ಲೇ ಆತ ಹೋಗಿ ಅಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾನೆ ಎಂದು ಹೇಳುವುದರಲ್ಲಿ ಅರ್ಥವಿದೆಯಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.Sign in to your account
Username or Email Address


Password

 Remember Me


