ಬೆಂಗಳೂರು: ನಗರದ ಹೊರವಲಯದ ಆನೇಕಲ್‍ನ ಅತ್ತಿಬೆಲೆ ಅಂಬೇಡ್ಕರ್ ಕಾಲೋನಿಯಲ್ಲಿ ನವಜಾತ ಹೆಣ್ಣು ಮಗುವೊಂದನ್ನು ಪಾಪಿ ತಾಯಿ ಪೊದೆಯಲ್ಲಿ ಬಿಸಾಡಿ ಹೋಗಿದ್ದಾಳೆ.ಪೊದೆಯೊಂದರಲ್ಲಿ ಮಗು ಅಳುವ ಸದ್ದು ಕೇಳಿ ಬಂದಿದ್ದು ಅದೇ ಮಾರ್ಗವಾಗಿ ಕೆಲಸಕ್ಕೆ ತೆರಳುತ್ತಿದ್ದ ರೇಣುಕಾ ಎಂಬವರು ಹುಡುಕಿದಾಗ ಹೆಣ್ಣು ಮಗು ಪತ್ತೆಯಾಗಿದೆ. ಕೂಡಲೇ ಮಗುವನ್ನು ರಕ್ಷಿಸಿ ಮನೆಗೆ ತಂದು ಆರೈಕೆ ಮಡಿದ ರೇಣುಕಾ ನಂತರ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಅತ್ತಿಬೆಲೆ ಪೊಲೀಸರು ಇದೀಗ ಮಗುವನ್ನು ಬೆಂಗಳೂರಿನ ಕಿದ್ವಾಯ್ ಆಸ್ಪತ್ರೆ ಆವರಣದಲ್ಲಿರುವ ಶಿಶು ವಿಹಾರ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸುತ್ತ ಮುತ್ತಲ ಆಸ್ಪತ್ರೆಗಳಲ್ಲಿ ಕಳೆದ ಎರಡು ದಿನಗಳಲ್ಲಿ ಹೆರಿಗೆ ಆಗಿರುವ ಮಾಹಿತಿ ಪಡೆದುಕೊಂಡು ಮಗುವಿನ ಪೋಷಕರನ್ನು ಹುಡುಕುತ್ತಿದ್ದಾರೆ. Sign in to your account
Username or Email Address


Password

 Remember Me


