ರಾಯಚೂರು: ಪದೇ ಪದೇ ಚುಡಾಯಿಸುತ್ತಿದ್ದ ಯುವಕನ ಕಿರುಕುಳಕ್ಕೆ ಬೇಸತ್ತು ರಾಯಚೂರಿನಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.18 ವರ್ಷದ ಹುಲಿಗೆಮ್ಮ ಆತ್ಮಹತ್ಯೆಗೆ ಶರಣಾದ ಯುವತಿ. ಅಂಬೇಡ್ಕರ್ ನಗರದ ನಿವಾಸಿಯಾದ ಹುಲಿಗೆಮ್ಮಳನ್ನ ಜಹೀರ್ ಎಂಬಾತ ಚುಡಾಯಿಸುತ್ತಿದ್ದ. ಈತನ ಕಾಟದಿಂದ ಬೇಸತ್ತು ಆತನ ಪೋಷಕರಿಗೆ ಹುಲಿಗೆಮ್ಮ ದೂರು ನೀಡಿದ್ದಳು.ಆದ್ರೆ ತಮ್ಮ ಮಗನಿಗೆ ಬುದ್ಧಿ ಹೇಳಬೇಕಾದ ಜಹೀರ್ ಪೋಷಕರು ಹುಲಿಗೆಮ್ಮಳಿಗೆ ಬೈದು ಕಳುಸಿದ್ದರು. ಇದರಿಂದ ಮನನೊಂದ ಹುಲಿಗೆಮ್ಮ ಸೋಮವಾರ ರಾತ್ರಿ ನಗರದ ಮಾವಿನಕೆರೆ ಪಕ್ಕದ ಕಲ್ಯಾಣಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನ ಹೊರತೆಗೆದಿದ್ದಾರೆ. ಘಟನೆ ಹಿನ್ನೆಲೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


