ಮೈಸೂರು: ನಗರದ ಜೆಎಸ್‍ಎಸ್ ಲೇಔಟ್ ಎರಡನೇ ಹಂತದಲ್ಲಿ ವಾಸವಾಗಿದ್ದ ನವದಂಪತಿ ನೇಣಿಗೆ ಶರಣಾಗಿದ್ದಾರೆ.ವಿರೇಶ್ ಮತ್ತು ಆಶಾಲತಾ ಆತ್ಮಹತ್ಯೆಗೆ ಶರಣಾದ ದಂಪತಿ. ಚಿತ್ರದುರ್ಗ ಮೂಲದ ವೀರೇಶ್ ಮತ್ತು ಭದ್ರಾವತಿ ಮೂಲದ ಆಶಾಲತಾ ಏಪ್ರಿಲ್ 14 ರಂದು ಮದುವೆಯಾಗಿದ್ದರು. ವಿರೇಶ್ ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕುಪ್ಪೆಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಸಂಬಂಧಿಕರೋರ್ವರಿಗೆ ಕರೆ ಮಾಡಿ ನಿಮ್ಮ ಅತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದರು.ವಿಷಯ ತಿಳಿದು ಮನಗೆ ಬಂದು ನೋಡುವಷ್ಟರಲ್ಲಿ ವಿರೇಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ದಂಪತಿಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Sign in to your account
Username or Email Address


Password

 Remember Me


