ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್ ರಾಜ್‍ಕುಮಾರ್ ಅವರಿಗೆ 28ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ತಂದೆ ರಾಘವೇಂದ್ರ ರಾಜ್‍ಕುಮಾರ್, ತಾಯಿ ಹಾಗೂ ಅಭಿಮಾನಿಗಳೊಂದಿಗೆ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು.ಇಂದು ಬೆಳಗ್ಗೆ ಕುಟುಂಬ ಸಮೇತರಾಗಿ ಬಂದ ವಿನಯ್ ರಾಜ್‍ಕುಮಾರ್ ಡಾ. ರಾಜ್ ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ತಂದೆ-ತಾಯಿಯ ಆಶೀರ್ವಾದವನ್ನು ಪಡೆದಿದ್ದೇನೆ. ನನಗೆ ದೇವರು ಅಂದ್ರೆ ನಮ್ಮ ತಾತ. ನಾವುಗಳು ಸಿನಿಮಾ ರಂಗಕ್ಕೆ ಬರುವುದಕ್ಕೆ ಅವರೇ ಕಾರಣ. ಇವಾಗ ಎರಡು ಸಿನಿಮಾಗಳು ತೆರೆಕಂಡಿವೆ. ಈ ವರ್ಷ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅವುಗಳ ಹೆಸರು ಇನ್ನು ಫೈನಲ್ ಆಗಿಲ್ಲ. ನಮ್ಮ ತಾತನ ಕಾಲದಿಂದಲೂ ಅಭಿಮಾನಿಗಳು ಇಲ್ಲಿಗೆ ಬರ್ತಾರೆ. ಅವರ ಪ್ರೀತಿ ಅಭಿಮಾನಕ್ಕೆ ಧನ್ಯವಾದ ಎಂದು ವಿನಯ್ ರಾಜ್‍ಕುಮಾರ್ ಹೇಳಿದರು.ಸಿದ್ದಾರ್ಥ ಸಿನಿಮಾ ಮೂಲಕ ಸ್ಯಾಂಡಲ್‍ವುಡ್ ಅಂಗಳಕ್ಕೆ ಕಾಲಿಟ್ಟಿರುವ ದೊಡ್ಮನೆಯ ಕುಡಿ ವಿನಯ್ ರಾಜ್‍ಕುಮರ್ ಅತ್ಯಂತ ಸಂತೋಷದೊಂದಿಗೆ ತಮ್ಮ ಹುಟುಹಬ್ಬವನ್ನು ಆಚರಿಸಿಕೊಂಡರು. Sign in to your account
Username or Email Address


Password

 Remember Me


