ಬೆಂಗಳೂರು: ಬೆಳ್ಳಂಬೆಳಗ್ಗೆ ಇಲಿ ಕಾಟಕ್ಕೆ ಕಂಗಲಾದ ಜನ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದ ಘಟನೆ ಕೆಂಗೇರಿಯಲ್ಲಿ ನಡೆದಿದೆ.ಆಗಿದ್ದು ಇಷ್ಟೇ ಕೆಂಗೇರಿಯ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿನ ಭದ್ರತಾ ಕಪಾಟಿನ ಸೈರನ್ ವಯರನ್ನು ಇಲಿ ಇಂದು ಬೆಳಗ್ಗೆ ತುಂಡರಿಸಿತ್ತು. ವಯರ್ ತುಂಡಾಗಿದ್ದೆ ತಡ ಜೋರಾಗಿ ಸೈರನ್ ಮೊಳಗಲು ಆರಂಭವಾಯಿತು.ಸೈರನ್ ಶಬ್ಧ ಕೇಳಿ ಗಾಬರಿಯಾದ ಸುತ್ತಮುತ್ತಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದರು. ಕೆಂಗೇರಿ ಪೊಲೀಸರು ಕಚೇರಿಯ ಭದ್ರತಾ ಕೊಠಡಿ ಪರಿಶೀಲನೆ ನಡೆಸಿದಾಗ ಇಲಿ ಕಡಿತದ ಪರಿಣಾಮ ಸೈರನ್ ಸದ್ದು ಮಾಡಿದ್ದ ವಿಷಯ ಬಯಲಿಗೆ ಬಂತು.4 ತಿಂಗಳ ಹಿಂದೆ ಇದೇ ರೀತಿ ಸೈರನ್ ಸದ್ದು ಮಾಡಿತ್ತು. ಈಗ ಮತ್ತೊಮ್ಮೆ ಇದೇ ರೀತಿ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ಮುತ್ತೂಟ್ ಫೈನಾನ್ಸ್ ಸಿಬ್ಬಂದಿಗೆ ಜನರು ಛೀಮಾರಿ ಹಾಕಿದರು.ಕೊನೆಗೆ ಪೊಲೀಸ್ ಠಾಣೆಯಲ್ಲಿ ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
 
 Advertisement 









 Advertisement 




 Sign in to your account
Username or Email Address


Password

 Remember Me


