ತುಮಕೂರು: ರಾಜ್ಯದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನೀರಿಲ್ಲದೇ ಜನ ಜಾನುವಾರಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆನೂ ಕುಡಿಯೋ ನೀರು ಸಾಗ್ತಿದ್ದು, ಆ ನೀರಿಗೆ ಟಾಯ್ಲೆಟ್ ನೀರು ಸೇರ್ಕೊಂಡು ಮನೆಗಳಿಗೆ ಸರಬರಾಜು ಆಗುತ್ತಿದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.ಹೌದು. ತುಮಕೂರು ನಗರದ 12ನೇ ವಾರ್ಡ್‍ನಲ್ಲಿ ಮನೆಯ ಸಂಪ್‍ಗಳಲ್ಲೂ ಕೊಳಚೆ ನೀರು, ಬಕೆಟ್‍ನಲ್ಲೂ ಕೊಳಚೆ ನೀರು. ವಾಟರ್ ಬಾಟೆಲ್‍ನಲ್ಲೂ ಕೊಳಚೆ ನೀರು ಬರುತ್ತಿದ್ದು, ಜನ ಈ ನೀರನ್ನೇ ಕುಡಿಯೋ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಚರಂಡಿ ಪಕ್ಕದಲ್ಲಿ ನೀರಿನ ಪೈಪ್ ಒಡೆದಿರೋದು. ಇದ್ರಿಂದ ಗಲೀಜು ನೀರು ಮಿಶ್ರಿತವಾಗಿ ಬರುತ್ತಿದೆ. ಕೌನ್ಸಿಲರ್ ಈ ಕಡೆ ಬರ್ತಾ ಇಲ್ಲ. ಫೋನ್ ಮಾಡಿದ್ರೆ ರಿಸೀವ್ ಮಾಡಲ್ಲ ಅಂತಾ ಸ್ಥಳೀಯರಾದ ಮೋಸಿನಾ ಬಾನು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.ಈ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಭಾರಿ ಸ್ಥಳೀಯರು ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರು ಬರುವ ಪೈಪ್‍ಲೈನ್ ಅನ್ನು ಒಳಚರಂಡಿ ಪಕ್ಕದಲ್ಲಿ ಹಾಕಿರುವುದು ಕಲುಷಿತ ನೀರು ಬರೋಕೆ ಕಾರಣ ಅಂತಾ ರಿಯಾನ್ ಖಾನ್ ಕಿಡಿಕಾರಿದ್ದಾರೆ.ಭೀಕರ ಬರ ಬಂದಿರೋ ಈ ಟೈಮ್‍ನಲ್ಲಿ ನೀರು ಹೀಗೆ ವ್ಯರ್ಥವಾಗ್ತಿರೋದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸದಿದ್ರೆ ಜನ ಬೀದಿಗಿಳಿಯೋದು ಗ್ಯಾರಂಟಿ.Sign in to your account
Username or Email Address


Password

 Remember Me


