ಶಿವಮೊಗ್ಗ: ಗ್ರಾಮ ಪಂಚಾಯ್ತಿ ಸದಸ್ಯೆ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶಿಮಮೊಗ್ಗ ಸಮೀಪದ ಹೊಳೆಬೆನವಳ್ಳಿ ತಾಂಡಾದಲ್ಲಿ ನಡೆದಿದೆ.ಗ್ರಾಮ ಪಂಚಾಯ್ತಿ ಸದಸ್ಯೆ ಲೋಕಿಬಾಯಿ ಎಂಬವರ ಪತಿ ಮಹೇಶ್ ನಾಯ್ಕ ಕೊಲೆಗೀಡಾಗಿರುವ ವ್ಯಕ್ತಿ. ರೌಡಿಶೀಟರ್ ಆಗಿದ್ದ ಮಹೇಶ್ ನಾಯ್ಕ ಬೈಕಿನಲ್ಲಿ ಬರುವಾಗ ಇದೇ ಗ್ರಾಮದ ಕುಮಾರನಾಯ್ಕ ಹಾಗೂ ಇನ್ನಿತರರು ಇಂದು ಮಧ್ಯಾಹ್ನ ಸಣ್ಣ ತಾಂಡ ಚಾನಲ್ ಬಳಿ ಅಡ್ಡ ಹಾಕಿ ಮಚ್ಚು ಇನ್ನಿತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಮಹೇಶನಾಯ್ಕ ಮೂರು ತಿಂಗಳ ಹಿಂದೆ ಗ್ಯಾಂಗ್ ಕಟ್ಟಿಕೊಂಡು ಕುಮಾರನಾಯ್ಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಈ ಸಂಬಂಧ ಜೈಲಿಗೆ ಹೋಗಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಇದೇ ವೈಷಮ್ಯದಿಂದ ಇಂದು ಮಹೇಶ್ ನಾಯ್ಕನನ್ನು ಕೊಲೆ ಮಾಡಲಾಗಿದೆ.ಈ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


