ಬೆಂಗಳೂರು: ರಸ್ತೆಯಲ್ಲಿ ಊಟದ ಪಾರ್ಸೆಲ್‍ಗಾಗಿ ಕಾಯುತ್ತಿದ್ದಾಗ ಹಿಂಭಾಗಕ್ಕೆ ಹೊಡೆದು ಮುಂದೆ ಹೋಗಿ ಫ್ಲೈಯಿಂಗ್ ಕಿಸ್ ಕೊಟ್ಟು ಕೀಟಲೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಕಾಮುಕರ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.ಮೂಲತಃ ಪಶ್ಚಿಮ ಬಂಗಾಳದ ವಿದ್ಯಾರ್ಥಿನಿ ನಾಗರಬಾವಿ ಸರ್ಕಲ್‍ನ ರೋಲ್ಸ್ ಆನ್ ವೀಲ್ಸ್ ಹೊಟೇಲ್‍ನಲ್ಲಿ ಊಟಕ್ಕೆ ಆರ್ಡರ್ ಮಾಡಿ ನಿಂತಿದ್ದರು. ಊಟದ ಪಾರ್ಸೆಲ್‍ಗಾಗಿ ಕಾಯುತ್ತಿದ್ದಾಗ ಯಮಹ ಬೈಕ್‍ನಲ್ಲಿ ಬಂದ ಕಾಮುಕರು ಯುವತಿಯ ಮುಂದೆ ಬೈಕ್ ವೀಲ್ಹಿಂಗ್ ಮಾಡಿದ್ದಾರೆ. ಯಾರೋ ಪೊರ್ಕಿಗಳು ಅಂತಾ ದೂರು ನೀಡದೇ ವಿದ್ಯಾರ್ಥಿನಿ ಸುಮ್ಮನಾಗಿದ್ದರು.ಆದರೆ ಕಾಮುಕರು ವಿದ್ಯಾರ್ಥಿನಿಯನ್ನು ಫಾಲೋ ಮಾಡಿ ಹಿಂಭಾಗಕ್ಕೆ ಹೊಡೆದು ಹೋಗಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರ ಜೊತೆ ಬಂದು ಕಾಮುಕರ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಕಾಮುಕರ ಪತ್ತೆಗಾಗಿ ಜಾಲ ಬೀಸಿದ್ದಾರೆ. Sign in to your account
Username or Email Address


Password

 Remember Me


