ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬುಧವಾರ ತಡರಾತ್ರಿ ಭಯಾನಕ ದಾಂಧಲೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮೆನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ.ಶಿವಾಜಿನಗರದ ತಿಮ್ಮಯ್ಯ ರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ರೀಟಾ ಎಂಬಾಕೆಯ ಮನೆಯ ಮೇಲೆ ಪಕ್ಕದ ಮನೆಯವರಾದ ಸುಹೇಲ್ ಹಾಗೂ ಮಹ್ಮದ್ ನೂರ್ 30ಕ್ಕೂ ಹೆಚ್ಚು ಮಂದಿಯ ಗ್ಯಾಂಗ್ ಕರೆದುಕೊಂಡು ಬಂದು ದಾಂಧಲೆ ನಡೆಸಿದ್ದಾರೆ.ಸುಹೇಲ್, ಮಹ್ಮದ್ ನೂರ್ ಮತ್ತು ತಂಡ ಮಹಿಳೆಯರ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಬ್ಯಾಟುಗಳನ್ನೇ ಅಸ್ತ್ರಗಳಾಗಿ ಬಳಸಿಕೊಂಡ್ರೆ ಹಲ್ಲೆಯಿಂದ ಪಾರಾಗಲು ಮನೆಯವರು ಪಾತ್ರೆ ಪಗಡಿಗಳನ್ನೇ ಗುರಾಣಿಯಂತೆ ಮಾಡಿಕೊಂಡಿದ್ದಾರೆ. ವೃದ್ಧೆ ರೀಟಾ, ಮಹಿಳೆಯರಾದ ಸೋಫಿಯಾ, ಸಿಸಿಲೀಯಾ, ಸಾಂಗ್ಲೀನ್, ಸ್ಟಾಲೀನ್ ಸೇರಿದಂತೆ ಕುಟುಂಬದ 8 ಮಂದಿಯ ಮೇಲೆ ಹಲ್ಲೆ ನಡೆದಿದೆ.ಈ ಬಗ್ಗೆ ದೂರು ನೀಡಿದ್ರೆ ಶಿವಾಜಿನಗರ ಪೊಲೀಸರು ಕೇಸ್ ಪಡೆದುಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ರೀಟಾ ಕುಟುಂಬಸ್ಥರು ಆರೋಪಿಸಿದ್ದಾರೆ.Sign in to your account
Username or Email Address


Password

 Remember Me


