ಬೆಂಗಳೂರು: ನಟಿ ಭಾವನಾ ಮೆನನ್ ಹಾಗೂ ಕನ್ನಡ ನಿರ್ಮಾಪಕ ನವೀನ್ ವಿವಾಹದ ಡೇಟ್ ಫಿಕ್ಸ್ ಆಗಿದೆ. ಇದೇ ವರ್ಷ ಅಕ್ಟೋಬರ್ 27ರಂದು ಕೇರಳದ ತ್ರಿಶೂರ್‍ನಲ್ಲಿ ವಿವಾಹವಾಗಲಿದ್ದಾರೆ.ಸಂಬಂಧಿಕರು ಹಾಗೂ ಆಪ್ತರನ್ನಷ್ಟೇ ಮದುವೆಗೆ ಆಹ್ವಾನಿಸುವುದಾಗಿ ಭಾವನಾ ತಾಯಿ ಪುಷ್ಪಾ ಹೇಳಿದ್ದಾರೆ. ಮೇ ತಿಂಗಳ ಕೊನೆಯಲ್ಲಿ ಭಾವನಾ ಶೂಟಿಂಗ್ ಮುಗಿಸ್ ಸ್ಕಾಟ್ಲೆಂಡ್‍ನಿಂದ ವಾಪಾಸ್ ಆಗಲಿದ್ದು, ಮದುವೆಗೆ ಚಿತ್ರರಂಗದಿಂದ ಯಾರನ್ನೆಲ್ಲಾ ಆಹ್ವಾನಿಸಬೇಕು ಎಂದು ಭಾವನಾ ಅವರೇ ಖುದ್ದಾಗಿ ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕೊಚ್ಚಿ ನಗರದಲ್ಲಿ ಯಾವುದೇ ಕಾರ್ಯಕ್ರಮ ನಿಗದಿಗೊಳಿಸಿಲ್ಲ ಎಂದೂ ಅವರು ಹೇಳಿದ್ದಾರೆ. ಸದ್ಯ ಭಾವನಾ ಸ್ಕಾಟ್ಲೆಂಡ್‍ನಲ್ಲಿ ಪೃಥ್ವಿರಾಜ್ ರಾಜ್ ಜೊತೆ ಆದಂ ಜೋನ್ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ.ಕಳೆದ ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜು ವಾರಿಯರ್ ಹಾಗೂ ಸಂಯುಕ್ತ ವರ್ಮಾ ಪಾಲ್ಗೊಂಡಿದ್ದರು.ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಲ್ಲೂ ಅಭಿನಯಿಸಿದ್ದರು. Sign in to your account
Username or Email Address


Password

 Remember Me


