ಬೆಳಗಾವಿ: ಬಿಜೆಪಿ ಎಂಎಲ್‍ಸಿ ಮಹಾಂತೇಶ ಕವಟಗಿಮಠ ಮಾಧ್ಯಮಗಳಿರುವ ವಾಟ್ಸಪ್ ಗ್ರೂಪಿಗೆ ಅಶ್ಲೀಲ ಫೋಟೋಗಳನ್ನು ಹಾಕಿದ್ದಾರೆ.ಇಂದು ಸಂಜೆ ಮಹಾಂತೇಶ ಕವಟಗಿಮಠ ಬೆಳಗಾವಿ ಮೀಡಿಯಾ ಫೋರ್ಸ್ ಗ್ರೂಪ್‍ನಲ್ಲಿ ಫೋಟೋ ಹಾಕಿ ಗ್ರೂಪಿನಲ್ಲಿರುವ ಸದಸ್ಯರಿಗೆ ಮುಜುಗರವನ್ನು ಉಂಟು ಮಾಡಿದ್ದಾರೆ.ಈ ಗ್ರೂಪಿನಲ್ಲಿ ರಾಜಕಾರಣಿಗಳು, ಮಾಧ್ಯಮದ ವ್ಯಕ್ತಿಗಳು, ಅಧಿಕಾರಿಗಳು ಸೇರಿ ಸುಮಾರು 50ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದು ಸಂಜೆ ಕವಟಗಿಮಠ ಅವರ ವಾಟ್ಸಪ್ ನಂಬರ್ ನಿಂದ ಫೋಟೋಗಳು ಬಂದಿವೆ. ಈ ಫೋಟೋಗಳನ್ನು ನೋಡಿದ ಕೂಡಲೇ 30ಕ್ಕೂ ಹೆಚ್ಚು ಸದಸ್ಯರು  ಕವಟಗಿಮಠ ಅವರನ್ನು ತರಾಟೆಗೆ ತೆಗೆದುಕೊಂಡು ಗ್ರೂಪ್‍ನಿಂದ  ಲೆಫ್ಟ್ ಆಗಿದ್ದಾರೆ.ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮಹಾಂತೇಶ ಕವಟಗಿಮಠ, ಅಚಾತುರ್ಯವಾಗಿ ಈ ಘಟನೆ ನಡೆದಿದೆ. ನಾನು ಉದ್ದೇಶ ಪೂರ್ವಕವಾಗಿ ಪೋಟೋ ಹಾಕಿಲ್ಲ. ಈ ಘಟನೆಯಿಂದ ಯಾರಿಗಾದರೂ ನೋವಾದರೆ ಕ್ಷಮೆಕೇಳುತ್ತೇನೆ ಎಂದು  ತಿಳಿಸಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್Sign in to your account
Username or Email Address


Password

 Remember Me


