ಕಲಬುರಗಿ: ಕಳ್ಳರ ಅಟ್ಟಹಾಸಕ್ಕೆ ಮಿತಿ ಇಲ್ಲದಂತಾಗಿದ್ದು, ಇತ್ತೀಚೆಗಷ್ಟೇ ಕೊಲೆ ಮಾಡಿ ದರೋಡೆ ಮಾಡಿಕೊಂಡು ಹೋಗಿದ್ದ ಮನೆಯಲ್ಲೇ ಈಗ ಮತ್ತೆ ಖದೀಮರು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಸಿದ್ರಾಮ ಬಂಡೆ ಅವರ ಮನೆ ಬಾಗಿಲು ಮುರಿದು ಕಪಾಟಿನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ ಮಾಡಲಾಗಿದೆ. ಏಪ್ರಿಲ್ 28 ರಂದು ರಾತ್ರಿ ಇದೆ ಮನೆಗೆ ನುಗ್ಗಿ ಬಂಡೆಯವರ ಚಿಕ್ಕಮ್ಮ ಸೋನಾಬಾಯಿ ಬಂಡೆ (60) ಎಂಬವರನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ನಂತರ ಕುಟುಂಬಸ್ಥರ ಮೇಲೂ ಮಾರಾಣಾಂತಿಕ ಹಲ್ಲೆ ಕೂಡ ನಡೆದಿತ್ತು.ಇದನ್ನೂ ಓದಿ: ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಚಿಕ್ಕಮ್ಮನ ಬರ್ಬರ ಹತ್ಯೆಗಾಯಗೊಂಡ ಕುಟುಂಬಸ್ಥರು ಮನೆ ಬೀಗ ಹಾಕಿಕೊಂಡು ಸೋಲಾಪುರ ಜಿಲ್ಲೆಯ ಉಮರ್ಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಮತ್ತೆ ರಾತ್ರಿ ಮನೆಗೆ ನುಗ್ಗಿದ ಕಳ್ಳರು ದುಷ್ಕೃತ್ಯ ನಡೆಸಿದ್ದಾರೆ. ಘಟನೆಯಿಂದ ಬಂಡೆ ಕುಟುಂಬ ಭಯಭೀತವಾಗಿದೆ. ಸ್ಥಳಕ್ಕೆ ಆಳಂದ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದರೋಡೆಕೋರರ ದಾಳಿಯಲ್ಲಿ ಕೊಲೆಗೀಡಾಗಿರುವ ಸೋನಾಬಾಯಿ ಬಂಡೆ ಅವರು ಭೂಗತಪಾತಕಿ ಮುನ್ನಾನಿಂದ ಹುತಾತ್ಮರಾದ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ಸಂಬಂಧಿಯಾಗಿದ್ದಾರೆ.
 






 Advertisement 




ದರೋಡೆಕೋರರ ದಾಳಿಯಲ್ಲಿ ಕೊಲೆಗೀಡಾಗಿರುವ ಸೋನಾಬಾಯಿ ಬಂಡೆ ಅವರು ಭೂಗತಪಾತಕಿ ಮುನ್ನಾನಿಂದ ಹುತಾತ್ಮರಾದ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ಸಂಬಂಧಿಯಾಗಿದ್ದಾರೆ. Sign in to your account
Username or Email Address


Password

 Remember Me


