ಬೆಂಗಳೂರು: ಕನ್ನಡ ಚಿತ್ರ ನಟಿಯನ್ನು ಇಬ್ಬರು  ಯುವಕರು ಭಾನುವಾರ ರಾತ್ರಿ ಎಳೆದಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆ ಹೆಗ್ಗನಹಳ್ಳಿಯಲ್ಲಿ ನಡೆದಿದೆ.ಸಚಿನ್, ಪ್ರವೀಣ್ ವಿರುದ್ಧ ಈಗ ಚಿತ್ರ ನಟಿ ದೂರು ನೀಡಿದ್ದು, ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಆರೋಪಿಗಳಿಬ್ಬರೂ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ನಿನ್ನೆ ಶೂಟಿಂಗ್ ಮುಗಿಸಿ ಮನೆಗೆ ಕಾರಿನಲ್ಲಿ ಬರುತ್ತಿದ್ದಾಗ ಪ್ರವೀಣ್ ಕರೆ ಮಾಡಿ ಮದುವೆಯಾಗುವಂತೆ ಪೀಡಿಸಿದ್ದಾನೆ. ಹೆಗ್ಗನಹಳ್ಳಿಯಲ್ಲಿ ಕಾರು ನಿಲ್ಲಿಸಿದ್ದಾಗ ನನ್ನ ಮೇಲೆ ಇವರಿಬ್ಬರು ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ನೊಂದು ನಾನು ದೂರು ನೀಡಿದ್ದೇನೆ ಎಂದು ನಟಿ ಹೇಳಿದ್ದಾರೆ.ಚಿತ್ರ ನಟಿ ಈ ಹಿಂದೆ ಪೋಷಕರ ಜೊತೆ ಕೆ.ಟಿ.ಜಿ.ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಸಚಿನ್ ಹಾಗೂ ಪ್ರವೀಣ್ ಪರಿಚಯ ನಟಿಗೆ ಆಗಿದ್ದು ಮೂವರು ಸ್ನೇಹಿತರಾಗಿದ್ದರು. ಮೂರು ವರ್ಷದ ಹಿಂದೆ ನಟಿ ತಂದೆ, ತಾಯಿ ಜೊತೆ ವಿಜಯನಗಕ್ಕೆ ಶಿಫ್ಟ್ ಆಗಿದ್ದರು.ಶಿಫ್ಟ್ ಆದ ಬಳಿಕ ಪ್ರವೀಣ್ ಅಲಿಯಾಸ್ ಪುಟ್ಟ ನಟಿಗೆ ಫೋನ್ ಮಾಡಿ ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ. ಒಂದು ವೇಳೆ ಲವ್ ಮಾಡದೇ ಇದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವೇಳೆ ನಟಿ, ನಿನ್ನನ್ನು ನಾನು ಪ್ರೀತಿ ಮಾಡುವುದಿಲ್ಲ ಎಂದು ಪರಿ ಪರಿಯಾಗಿ ಹೇಳಿದ್ದರೂ ಆತ ಪದೇ ಪದೇ ಪೀಡಿಸುತ್ತಿದ್ದ. ಅಷ್ಟೇ ಅಲ್ಲದೇ ತನ್ನ ಮೊಬೈಲ್‍ನಿಂದ ಅಸಭ್ಯವಾಗಿ ಅಶ್ಲೀಲ ಪದಗಳನ್ನು ಬಳಸಿ ಎಸ್‍ಎಂಎಸ್ ಮಾಡುತ್ತಿದ್ದ. ಎಷ್ಟೇ ಕೇಳಿಕೊಂಡು ಆತನು ನನ್ನನ್ನು ಚುಡಾಯಿಸುತ್ತಿದ್ದಿದ್ದನ್ನು ನಿಲ್ಲಿಸಿರಲಿಲ್ಲ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.Sign in to your account
Username or Email Address


Password

 Remember Me


