ಬೆಂಗಳೂರು: ಶಿವಮೊಗ್ಗದಲ್ಲಿ (Shivamogga) ಸಣ್ಣ ಗಲಾಟೆ ಆಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ (Stone Pelting) ಆಗಿರೋದು ಹೊಸದೇನಲ್ಲ ಎಂದು ಗೃಹಸಚಿವ ಜಿ. ಪರಮೇಶ್ವರ್ (G Parameshwara) ಬೇಜವಾಬ್ದಾರಿಯ ಮಾತುಗಳನ್ನಾಡಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಹಲವರ ಬಂಧನ ಆಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡೋದು ಹೊಸದೇನಲ್ಲ. ಈ ಹಿಂದೆಯೂ ಆಗಿದೆ, ಈಗಲೂ ಆಗುತ್ತಿದೆ. ಘಟನೆ ನಡೆದು ಹೋಗಿದೆ. ಅದನ್ನು ನಿಯಂತ್ರಿಸಲು ಪೊಲೀಸರು ಸಮರ್ಥರಿದ್ದಾರೆ ಎಂದರು.ಅಂತಹ ಸೂಕ್ಷ್ಮ ಪ್ರದೇಶದಲ್ಲಿ ಮೊದಲೇ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ದೊಡ್ಡ ಪ್ರಮಾಣದ ಗಲಾಟೆ ನಡೆಯುವುದನ್ನು ತಡೆಯಲಾಗಿದೆ. ಸಣ್ಣ ಪ್ರಮಾಣದ ಗಲಾಟೆ ಆಗಿದೆ. ಅದನ್ನು ಅಧಿಕಾರಿಗಳು ನಿಯಂತ್ರಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ ಕೋಮು ಗಲಭೆ ಪ್ರಕರಣದಲ್ಲಿ 43 ಜನರ ಬಂಧನ: ಸಿದ್ದರಾಮಯ್ಯಇಡೀ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸುವ ಮೂಲಕ ಪ್ರಚೋದನೆ ನೀಡುತ್ತಾರೆ. ಇದು ಎಲ್ಲಾ ಕಡೆ ಆಗಿದೆ. ಅದನ್ನು ನಮ್ಮ ಅಧಿಕಾರಿಗಳು ನಿಯಂತ್ರಿಸುತ್ತಾರೆ. ಎಲ್ಲೂ ಅಂತಹ ಅಹಿತಕರ ದೊಡ್ಡ ಗಲಾಟೆ ಆಗಲು ಬಿಟ್ಟಿಲ್ಲ. ಪ್ರತಿ ಬಾರಿ ಮೆರವಣಿಗೆ ಮಾಡುವ ಸಂದರ್ಭ ಗಲಾಟೆ ಮಾಡಬೇಡಿ ಎಂದು ತಿಳಿಸುತ್ತಾರೆ. ಅದನ್ನು ಮೀರಿ ಹೋದ್ರೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಇದು ಕೋಮು ಗಲಭೆಯಲ್ಲ, ಮಾನಸಿಕ ಸ್ಥಿಮಿತ ಕಳೆದುಕೊಂಡವರು ಮಾಡಿದ್ದು: ಮಧು ಬಂಗಾರಪ್ಪWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


