ಬೆಂಗಳೂರು: ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕೆಂಚನಹಳ್ಳಿಯಲ್ಲಿರುವ ಹಳೇ ಪ್ಲಾಸ್ಟಿಕ್‍ ನ ಸಂಸ್ಕರಣ ಘಟಕದಲ್ಲಿ ಭಾನುವಾರ ರಾತ್ರಿ 12 ಗಂಟೆಗೆ ದಿಢೀರ್ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಹಳೇ ಪ್ಲಾಸ್ಟಿಕ್ ಸುಟ್ಟು ಭಸ್ಮವಾಗಿದೆ.ಇದು ದೇವು ಎಂಬುವವರಿಗೆ ಸೇರಿದ ಗೋದಾಮು ಆಗಿದ್ದು, ಸ್ಥಳಕ್ಕೆ 8 ಆಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಕುಡಿತದ ಅಮಲಿನಲ್ಲಿ ಯಾರೋ ಗೋದಾಮಿಗೆ ಬೆಂಕಿ ಹಚ್ಚಿದ್ದಾರೆಂದು ಎಂದು ಶಂಕಿಸಲಾಗಿದೆ. ಬೆಂಕಿ ಅನಾಹುತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಈ ಸಂಬಂಧ ಕೆಂಗೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.Sign in to your account
Username or Email Address


Password

 Remember Me


