ಬೆಳಗಾವಿ: ಮನೆಯಲ್ಲಿ ಮಕ್ಕಳಿದ್ರೆ ತುಂಬಾ ಹುಷಾರಾಗಿರ್ಬೇಕು. ತಂದೆ ತಾಯಂದಿರು ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಕುತ್ತು ಬರುತ್ತೆ ಅನ್ನೋದಕ್ಕೆ ಬೆಳಗಾವಿಯಿಂದ ಬಂದಿರೋ ಈ ಸ್ಟೋರಿನೇ ಸಾಕ್ಷಿ.ಲಕ್ಷ್ಮಣ ರೇಖೆ ತಿಂದು 3 ವರ್ಷದ ಮಗುವೊಂದು ಅಸ್ವಸ್ಥಗೊಂಡ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಢ ಗ್ರಾಮದಲ್ಲಿ ನಡೆದಿದೆ. ಹರೀಶ್ ತಳವಾರ ಅಸ್ವಸ್ಥಗೊಂಡ ಮಗು.ನಡೆದಿದ್ದೇನು?: ಮೂರು ವರ್ಷದ ಹರೀಶ್ ಆಟವಾಡುತ್ತಾ ಪಕ್ಕದಲ್ಲಿದ್ದ ಜಿರಲೆ ಸಾಯಲು ಬಳಸುವ ಲಕ್ಷ್ಮಣ ರೇಖೆಯನ್ನು ತಿಂದಿದ್ದಾನೆ. ಪರಿಣಾಮ ಆತನಿಗೆ ವಾಂತಿಭೇದಿ ಆರಂಭವಾಗಿ ತೀವ್ರ ಅಸ್ವಸ್ಥಗೊಂಡಿದ್ದನು. ಮಗ ಅಸ್ವಸ್ಥಗೊಂಡ ಕೂಡಲೇ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹರೀಶ್ ಪಿಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.Sign in to your account
Username or Email Address


Password

 Remember Me


