ಆನೆಕಲ್: ಬಾಹುಬಲಿ-2 ಸಿನಿಮಾ ನೋಡಲು ಟಿಕೆಟ್ ಸಿಗಲಿಲ್ಲವೆಂದು ಕೋಪೋದ್ರಕ್ತನಾದ ವ್ಯಕ್ತಿಯೊಬ್ಬ ಥಿಯೇಟರ್ ಎದುರು ನಿಲ್ಲಿಸಿದ್ದ ಬೆಂಕಿ ಹಚ್ಚಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಹೊಸಕೋಟೆ ಸಮೀಪದ ಅವಲಹಳ್ಳಿಯ ಸಂತೋಷ್ ಈ ಕೃತ್ಯ ಎಸಗಿದ ಆರೋಪಿ.ಸಂತೋಷ್ ಇಂದು ಬೆಳಗ್ಗಿನಿಂದಲೇ ಟಿಕೆಟ್ ಗಾಗಿ ಬೆಂಗಳೂರು ಹೊರವಲಯದ ಹೊಸಕೋಟೆ ಪಟ್ಟಣದಲ್ಲಿರೋ ಅಲಂಕಾರ ಥಿಯೇಟರ್ ಎದುರು ಕುಳಿತಿದ್ದ. ಆದ್ರೆ ಮೊದಲ ಪ್ರದರ್ಶನದ ಟಿಕೆಟ್ ಖಾಲಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ಸಂತೋಷ್ ಥಿಯೇಟರ್ ನ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣವೇ ಸ್ಥಳದಲ್ಲೇ ಇದ್ದ ಮಂದಿ ಬೆಂಕಿಯನ್ನು ನಂದಿಸಿ ಸಂತೊಷನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಘಟನೆಯಲ್ಲಿ ಸುಮಾರು 10 ಬೈಕ್ ಗಳಿಗೆ ಸಣ್ಣ ಮಟ್ಟದ ಹನಿಯಾಗಿದ್ದು ತಕ್ಷಣವೇ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದಂತಾಗಿದೆ.Sign in to your account
Username or Email Address


Password

 Remember Me


