ತುಮಕೂರು: ರೋಗಿಯಿಂದಲೇ 108 ವಾಹನ ಜಖಂ ಆದ ಘಟನೆ ಜಿಲ್ಲಾಸ್ಪತ್ರೆ ಮುಂಭಾಗ ತಡರಾತ್ರಿ ನಡೆದಿದೆ.26 ವರ್ಷದ ಗಿರೀಶ್ ತಡರಾತ್ರಿ ಗುಬ್ಬಿ ತಾಲೂಕಿನ ಕೆ.ಜಿ.ಟೆಂಪಲ್ ಬಳಿ ಬೈಕ್‍ನಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನ ಗುಬ್ಬಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. 108 ವಾಹನದಲ್ಲಿ ಗಿರೀಶ್ ಹಾಗೂ ಅವರ ಸ್ನೇಹಿತರಿಬ್ಬರನ್ನ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಗಿರೀಶ್ ಒತ್ತಾಯಿಸಿದ್ದರು. ಇದಕ್ಕೆ 108 ಸಿಬ್ಬಂದಿ ಒಪ್ಪದಿರುವುದಕ್ಕೆ ಗಲಾಟೆ ನಡೆದಿದೆ.ಕುಪಿತಗೊಂಡ ಮೂವರು 108 ಸಿಬ್ಬಂದಿಯ ಮುಂದೆಯೇ ವಾಹನ ಜಖಂಗೊಳಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಿರೀಶ್ ಹಾಗು ಸ್ನೇಹಿತರಾದ ರಾಕೇಶ್ ಹಾಗೂ ನಟರಾಜುನನ್ನು ಪೊಲೀಸರು ತಡರಾತ್ರಿಯೇ ವಶಕ್ಕೆ ಪಡೆದಿದ್ದಾರೆ. ಬಳಿಕ ಗಿರೀಶ್‍ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.Sign in to your account
Username or Email Address


Password

 Remember Me


