ತುಮಕೂರು: ಮದುವೆಯಾಗೋದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಪರಾರಿಯಾದ ಪ್ರಿಯಕರನ ಮನೆ ಮುಂದೆ ನೊಂದ ಯುವತಿ ಧರಣಿ ಕುಳಿತ ಘಟನೆ ಕುಣಿಗಲ್‍ನ ಕೊತ್ತಿಪುರದಲ್ಲಿ ನಡೆದಿದೆ.5 ತಿಂಗಳ ಗರ್ಭಿಣಿ ವರಲಕ್ಷ್ಮೀ ತನ್ನ ಪ್ರಿಯಕರ ಮೋಹನ್ ಮನೆಮುಂದೆ ಧರಣಿ ಕುಳಿತಿದ್ದಾರೆ. ಕುಣಿಗಲ್ ತಾಲೂಕಿನ ಹನುಮೇಗೌಡ ಪಾಳ್ಯದ ವರಲಕ್ಷೀ ಹಾಗೂ ಕೊತ್ತಿಪುರ ಗ್ರಾಮದ ಮೋಹನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ವರಲಕ್ಷ್ಮೀ ಕುಣಿಗಲ್ ಪಟ್ಟಣಕ್ಕೆ ಕಾಲೇಜಿಗೆ ಹೋಗುತಿದ್ದ ವೇಳೆ ಹೂವು ಮಾರುತಿದ್ದ ಮೋಹನ್ ಗೆ ಪರಿಚಯವಾಗಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಮದುವೆಯಾಗೊದಾಗಿ ನಂಬಿಸಿದ ಮೋಹನ್ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಈಗ ವರಲಕ್ಷ್ಮೀ 5 ತಿಂಗಳ ಗರ್ಭಿಣಿಯಾಗಿದ್ದಾರೆ.ಗರ್ಭಿಣಿಯಾದ ಸುದ್ದಿ ತಿಳಿಯುತ್ತಿದ್ದಂತೆ ಮೋಹನ್ ತನ್ನ ವರಸೆ ಬದಲಸಿದ್ದಾನೆ. ಜಾತಿ ನೆಪವೊಡ್ಡಿ ಮದುವೆಯಾಗಲು ನಿರಾಕರಿಸಿದ್ದಾನೆ. ತನ್ನ ಪ್ರಿಯಕರನ ಮೋಸದಿಂದಾಗಿ ಮನನೊಂದ ವರಲಕ್ಷ್ಮೀ ಪ್ರಿಯಕರ ಮೋಹನ್ ಮನೆಮುಂದೆ ಧರಣಿ ಕುಳಿತಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.ಯುವತಿ ಧರಣಿ ಕುಳಿತ ವಿಚಾರ ತಿಳಿದ ತಾಲೂಕು ಮಹಿಳಾ ಸಂರಕ್ಷಣಾಧಿಕಾರಿ ರಜನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮೂಕಾಂಬಿಕಾ ಸ್ಥಳಕ್ಕೆ ಬಂದು ನೊಂದ ಯುವತಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಈ ನಡುವೆ ಕುಣಿಗಲ್ ಪೆÇಲೀಸರು ಆರೋಪಿ ಮೋಹನ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


