ಹಾವೇರಿ – ಆಕಸ್ಮಿಕ ಬೆಂಕಿಗೆ ಎಂಟು ಮೇವಿನ ಬಣವೆಗಳು ಸುಟ್ಟು ಭಸ್ಮವಾದ ಘಟನೆ ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೈತರಾದ ಶೇಖಪ್ಪ, ಬಸಪ್ಪ, ಹೊನ್ನಪ್ಪ ಮತ್ತು ಹೊನ್ನಪ್ಪ ಕುರಗುಂದ ಎಂಬವರಿಗೆ ಸೇರಿದ ಮೇವಿನ ಬಣವೆಗಳು ಬೆಂಕಿಗಾಹುತಿಯಾಗಿವೆ. ಪ್ರಸಕ್ತ ವರ್ಷ ಭೀಕರ ಬರಗಾಲವಿದ್ದ ಕಾರಣ ರೈತರು ಜಾನುವಾರುಗಳಿಗಾಗಿ ಮೇವನ್ನು ಸಂಗ್ರಹಿಸಿಟ್ಟಿದ್ದರು. ಎಂಟು ಬೇವಿನ ಬಣವೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿಕೊಂಡಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Sign in to your account
Username or Email Address


Password

 Remember Me


