ಬೆಂಗಳೂರು: ನಗರದ ವೈಯಾಲಿ ಕಾವಲ್‍ನ ಬಿಲ್ವ ಆಸ್ಪತ್ರೆಯಲ್ಲಿ ಬೆಳ್ಳಂ ಬೆಳಗ್ಗೆ ಅಗ್ನಿ ದುರಂತ ಸಂಭವಿಸಿದೆ.ಆಸ್ಪತ್ರೆಯ ಎರಡನೇ ಮಹಡಿಯಲ್ಲಿನ ಎಸಿ ಶಾರ್ಟ್ ಸರ್ಕ್ಯೂಟ್‍ನಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆಸ್ಪತ್ರೆ ಸಂಪೂರ್ಣ ಹೊತ್ತಿ ಉರಿದಿದೆ.ಒಳಗೆ ಸಿಲುಕಿಕೊಂಡಿದ್ದ 6 ಮಂದಿಯನ್ನ ರಕ್ಷಿಸಿ, ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಭರದಿಂದ ನಡೀತಿದೆ.ನಮಗೆ 6 ಗಂಟೆಗೆ ಕರೆ ಬಂದಿದೆ. ಮೊದಲು ಎರಡು ವಾಹನಗಳು ಬಂದಿತ್ತು. ನಂತರ ಮತ್ತೆ ನಾಲ್ಕು ವಾಹನಗಳು ಹೈಗ್ರೌಂಡ್ ಅಗ್ನಿಶಾಮಕದಳ ಠಾಣೆಯಿಂದ ಸ್ಥಳಕ್ಕೆ ಬಂದವು. ಆಸ್ಪತ್ರೆಯಲ್ಲಿ ಒಟ್ಟು 9 ಜನ ರೋಗಿಗಳು ಇದ್ರು. ಎಲ್ಲರನ್ನೂ ನಮ್ಮ ಸಿಬ್ಬಂದಿ ಗಾಜು ಒಡೆದು ಕಿಟಕಿ ಮೂಲಕ ರಕ್ಷಣೆ ಮಾಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳೀಯ ಪೊಲೀಸರು ತನಿಖೆ ನಡೆಸಬೇಕು ಅಂತ ಅಗ್ನಿಶಾಮಕದಳದ ನಿರ್ದೇಶಕರಾದ ಕೆ.ಯು ರಮೇಶ್ ಹೇಳಿದ್ದಾರೆ.Sign in to your account
Username or Email Address


Password

 Remember Me


