ಬೀದರ್: ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ವ್ಯಕ್ತಿಯೊಬ್ಬರು ಸಾರಿಗೆ ಸಂಸ್ಥೆಯ ಬಸ್‍ಗೆ ಸಿಲುಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ನಡೆದಿದೆ.30 ವರ್ಷದ ಸುರೇಶ್ ಬಿರಾದಾರ ಮೃತ ದುರ್ದೈವಿ. ಸುರೇಶ್ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನವರು ಎಂದು ತಿಳಿದುಬಂದಿದೆ. ಬಸವಕಲ್ಯಾಣ ಪಟ್ಟಣದಲ್ಲಿ ತಮ್ಮ ಸಂಬಂಧಿಯ ಮನೆಯಿಂದ ಹಿಂದಿರುಗುವಾಗ ಬಸ್‍ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಬಸ್ ಬಸವಕಲ್ಯಾಣದಿಂದ ರಾಜೇಶ್ವರ ನಗರಕ್ಕೆ ತೆರಳುತ್ತಿತ್ತು.ಸುರೇಶ್ ಅವರ ಮೃತ ದೇಹವನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಸ್ ಬಸವಕಲ್ಯಾಣ ಡಿಪೋಗೆ ಸೇರಿದ್ದಾಗಿದೆ. ಸ್ಥಳಕ್ಕೆ ಬಸವಕಲ್ಯಾಣ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


