ಮಂಡ್ಯ: ಹಾರ್ಡ್‍ವೇರ್ ಅಂಗಡಿಯ ಹಿಂಬಾಗಿಲು ಮುರಿದು ಒಳ್ಳನುಗ್ಗಿ ಇಬ್ಬರು ಕಳ್ಳರು ಹಣ ದೋಚಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯಾವಳಿ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿರುವ ರಮೇಶ್ ಎಂಬವರಿಗೆ ಸೇರಿದ ಚೌಡೇಶ್ವರಿ ಗ್ಲಾಸ್ ಪ್ಲೈವುಡ್ ಆಂಡ್ ಹಾರ್ಡ್‍ವೇರ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಗುರುವಾರ ರಾತ್ರಿ ಒಳ್ಳನುಗಿರುವ ಕಳ್ಳರಿಬ್ಬರು, ಕ್ಯಾಶ್‍ಬಾಕ್ಸ್ ನಲ್ಲಿದ್ದ ಸುಮಾರು ಐದು ಸಾವಿರ ರೂಪಾಯಿ ದೋಚಿದ್ದಾರೆ. ಇದಲ್ಲದೆ ಇದೇ ರಸ್ತೆಯಲ್ಲಿರುವ ಯೋಗಾನಂದ್ ಎಂಬುವರಿಗೆ ಸೇರಿದ ಹಾರ್ಡ್ ವೇರ್ ಅಂಗಡಿಯಲ್ಲಿಯೂ ಕಳ್ಳತನವಾಗಿದೆ. ಅಂಗಡಿ ಬಾಗಿಲು ಮುರಿದು ಸುಮಾರು 35 ಸಾವಿರ ರೂಪಾಯಿ ದೋಚಿದ್ದಾರೆ.ಸ್ಥಳಕ್ಕೆ ಕೆ.ಎಂ.ದೊಡ್ಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಎರಡು ಕಳ್ಳತನವನ್ನು ಒಂದೇ ತಂಡ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.Sign in to your account
Username or Email Address


Password

 Remember Me


