ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ತೆರೆದ ಕೊಳುವೆ ಬಾವಿಯನ್ನು ಮುಚ್ಚಿಸದೆ 6 ವರ್ಷದ ಕಂದಮ್ಮ ಕಾವೇರಿ ಸಾವಿಗೆ ಕಾರಣವಾಗಿದ್ದ ಜಮೀನಿನ ಮಾಲೀಕನ ಮಗನನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.ಬಾಗಲಕೋಟೆಯಲ್ಲಿ ತಲೆ ಮರಿಸಿಕೊಂಡಿದ್ದ ಶಂಕರ ಹಿಪ್ಪರಗಿಯ ಮಗ ಮುತ್ತಪ್ಪ ಶಂಕರ ಹಿಪ್ಪರಗಿಯನ್ನು ಐಗಳಿ ಪೆÇಲೀಸರು ಬಂಧಿಸಿದ್ದಾರೆ. ಇನ್ನು ಈತನ ತಂದೆ ಶಂಕರ ಹಿಪ್ಪರಗಿ ಇನ್ನೂ ತಲೆಮರೆಸಿಕೊಂಡಿದ್ದು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ತನ್ನ ಜಮೀನಿನ ಕೊಳವೆ ಬಾವಿಯಲ್ಲಿ ಕಾವೇರಿ ಬಿದ್ದ ಸುದ್ದಿ ತಿಳಿದ ತಕ್ಷಣವೇ ಶಂಕರ ಹಿಪ್ಪರಗಿ ಹಾಗೂ ಕುಟುಂಬ ಸದಸ್ಯರು ಪರಾರಿಯಾಗಿದ್ದರು.ಸತತ 53 ಗಂಟೆಗಳ ಕಾಲ ಕಾವೇರಿಯ ರಕ್ಷಣೆಗಾಗಿ ಎನ್‍ಆರ್‍ಡಿಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ರಕ್ಷಣಾ ಕಾರ್ಯಚರಣೆ ಫಲಿಸದ ಪರಿಣಾಮ ಕಾವೇರಿ ಶವವನ್ನು ಹೊರ ತೆಗೆಯಲಾಗಿತ್ತು. ಕಾವೇರಿಗಾಗಿ ರಾಜ್ಯದ ಜನತೆ ನಡೆಸಿದ ಪ್ರಾರ್ಥನೆ ಈಡೇರಿರಲಿಲ್ಲ.Sign in to your account
Username or Email Address


Password

 Remember Me


