ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಮೂರು ದಿನಗಳ ಪ್ರವಾಸಕ್ಕಾಗಿ ದುಬೈಗೆ ತೆರಳುತ್ತಿದ್ದು, ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಸಿಎಂಗೆ ಬೀಳ್ಕೊಡುಗೆ ನೀಡಿದ್ರು.ದುಬೈ ಪ್ರವಾಸದ ಹಿನ್ನೆಲೆಯಲ್ಲಿ ಹೊಸ ಸ್ಟೈಲ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಿಂಚಿದ್ರು. ದುಬೈ ಪ್ರವಾಸಕ್ಕೆ ಪಂಚೆ ಬದಲು ಸೂಟ್ ಧರಿಸಿದ್ರು.ಇಂದು ಕೆಂಪೇಗೌಡ ಏರ್‍ಪೋರ್ಟ್‍ನಿಂದ ಸಿಎಂ ದುಬೈಗೆ ತೆರಳಲಿದ್ದು, ಭಾನುವಾರ ಸಂಜೆ ವಾಪಸ್ ಆಗಲಿದ್ದಾರೆ. ಮೂರು ದಿನಗಳ ಕಾಲ ದುಬೈನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ದುಬೈಗೆ ತೆರಳಿ ಇಂದು ವಿಶ್ರಾಂತಿ ಪಡೆದು, ನಾಳೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಅಬುಧಾಬಿ ಪ್ರವಾಸ ಕೈಗೊಳ್ಳಲಿದ್ದು, ಶೇಕ್ ಜೈದಾ ಮಸೀದಿಗೆ ಭೇಟಿ ನೀಡಲಿದ್ದಾರೆ.ಶನಿವಾರ ಸಂಜೆ ಅಲ್ಲಿನ ಉದ್ಯಮಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯ ನಂತರ ಭಾನುವಾರ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.    Sign in to your account
Username or Email Address


Password

 Remember Me


