ತುಮಕೂರು: ಬುಧವಾರ ಸಂಜೆ ಜಿಲ್ಲೆಯಲ್ಲಿ ಗುಡಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿವೆ.ಜಿಲ್ಲೆಯ ಮಧುಗಿರಿ ತಾಲೂಕಿನ ಮರಿತಿಮ್ಮನಹಳ್ಳಿಯ ರೈತ ಗೋಪಾಲಯ್ಯ ಎಂಬವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ನಿನ್ನೆ ಸಂಜೆ ಮೋಡ ಕವಿದ ಮೇಲೆ ಗೋಪಾಲಯ್ಯ ಅವರು ತಮ್ಮ ಹಸುಗಳನ್ನು ಬಿದಿರು ಮರದ ಕೆಳಗೆ ಕಟ್ಟಿದ್ದರು. ಈ ವೇಳೆ ಹಸುಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿವೆ.ಈ ವರ್ಷ ಭೀಕರ ಬರಗಾರವಿದ್ದು, ಗೋಪಾಲಯ್ಯ ಅವರು ಹಸುಗಳ ಹಾಲು ಮಾರಿ ಜೀವನ ಸಾಗಿಸುತ್ತಿದ್ದರು. ಇದೀಗ ಬರಗಾಲದ ನಡುವೆ ಗೋಪಾಲಯ್ಯ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಾಲೂಕು ಆಡಳಿತ ಮಂಡಳಿ ಪರಿಹಾರ ನೀಡಬೇಕೆಂದು ಗೋಪಾಲಯ್ಯ ಮನವಿ ಮಾಡಿಕೊಂಡಿದ್ದಾರೆ. Sign in to your account
Username or Email Address


Password

 Remember Me


