ಬೆಂಗಳೂರು: ವಿಷಾಹಾರ ಸೇವಿಸಿ 15 ಮಂದಿ ಅಸ್ವಸ್ಥರಾದ ಘಟನೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದಿದೆ.ಮಂಗಳವಾರ ಸಂಜೆ ಸುಮಾರು 5.30ರ ಸಮಯದಲ್ಲಿ ಮಹಿಳೆಯೊಬ್ಬರು ಶೇಷಾದ್ರಿಪುರಂನ ಸಂಜಯ್ ನಗರದಲ್ಲಿ ಕಲ್ಯಾಣ ಮಂಟಪದಲ್ಲಿ ಉಳಿದಿದ್ದ ಸ್ವೀಟ್ ಮಾರಾಟ ಮಾಡ್ತಿದ್ರು. ಇದನ್ನು ಸಂಜಯ್ ನಗರದ ನಿವಾಸಿಗಳಾದ 13 ಮಂದಿ ಚಿಕ್ಕ ಮಕ್ಕಳು ಮತ್ತು ಇಬ್ಬರು ಮಹಿಳೆಯರು ಕೊಂಡು ತಿಂದಿದ್ದಾರೆ. ತಿಂದ 1.30 ಗಂಟೆಯಲ್ಲಿ ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ.ಸುಮಾರು 8.30ಕ್ಕೆ ಅಸ್ವಸ್ಥರನ್ನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದಾಗ ಫುಡ್ ಪಾಯ್ಸನ್ ಆಗಿರೋದಾಗಿ ವೈದ್ಯರು ತಿಳಿಸಿದ್ದಾರೆ. ಅಸ್ವಸ್ಥರಿಗೆ ಚಿಕಿತ್ಸೆ ನೀಡಿದ್ದು ಭಯ ಪಡುವಂತದ್ದು ಏನಿಲ್ಲ ಅಂತಾ ಆಸ್ಪತ್ರೆಯ ವೈದ್ಯರಾದ ಮೋಹನ್ ತಿಳಿಸಿದ್ದಾರೆ.Sign in to your account
Username or Email Address


Password

 Remember Me


